ನಾಪೆÉÇೀಕ್ಲು, ಮಾ. 31: ಏ. 15ರಿಂದ ನಾಪೆÇೀಕ್ಲು ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಕೊಡವ ಕುಟುಂಬಗಳ ನಡುವಿನ 22 ನೇ ವರ್ಷದ ಕುಲ್ಲೇಟಿರ ಕಪ್ ಹಾಕಿ ನಮ್ಮೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ತಂಡಗಳಿಗೆ ಒಡಿಕತ್ತಿಯನ್ನು ನೆನಪಿನ ಕಾಣಿಕೆಯಾಗಿ ನೀಡಲಾಗುವದು ಎಂದು ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಆಯೋಜಕರು ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕೆಗೆ ಹೇಳಿಕೆ ನೀಡಿದ ಕುಲ್ಲೇಟಿರ ಹಾಕಿ ನಮ್ಮೆ ಸಮಿತಿ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಪ್ಪ, ಪ್ರಧಾನ ಕಾರ್ಯದರ್ಶಿ ಅಜಿತ್ ನಾಣಯ್ಯ, ಸಂಚಾಲಕ ಅರುಣ್ ಬೇಬಾ ಕೊಡಗಿನ ರಾಜನಾಗಿದ್ದ ದೊಡ್ಡ ವೀರರಾಜನ ಕಾಲದಲ್ಲಿ ಅವರ ಸೈನ್ಯದಲ್ಲಿ ಸೇನಾಧಿಕಾರಿಗಳಾಗಿದ್ದ ಹಾಗೂ ಹಲವು ಯುದ್ಧಗಳಲ್ಲಿ ಭಾಗವಹಿಸಿದ್ದ ಕುಲ್ಲೇಟಿರ ಪೆÇನ್ನಣ್ಣ ಮತ್ತು ಕುಲ್ಲೇಟಿರ ಮಾಣಿಚ್ಚ ಅವರು ಒಡಿಕತ್ತಿಯನ್ನು ತಮ್ಮ ಆಯುಧವನ್ನಾಗಿಸಿಗೊಂಡು ತಮ್ಮ ತಂತ್ರಗಾರಿಕೆಯಿಂದ ಶತ್ರುಗಳನ್ನು ಹಿಮ್ಮೆಟ್ಟಿಸಿ ತಮ್ಮ ಪರಾಕ್ರಮ ಮೆರೆದಿದ್ದಾರೆ. ಅವರ ನೆನಪಿಗಾಗಿ ಹಾಕಿ ನಮ್ಮೆಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಒಡಿಕತ್ತಿಯನ್ನು ನೆನಪಿನ ಕಾಣಿಕೆಯಾಗಿ ನೀಡಲಾಗುವದು ಎಂದು ವಿವರಿಸಿದರು.

ನೋಂದಾವಣೆಗೆ ಕೊನೆ ದಿನ: ಹಾಕಿ ನಮ್ಮೆಯಲ್ಲಿ ಪಾಲ್ಗೊಳ್ಳುವ ಕುಟುಂಬ ತಂಡಗಳು ತಮ್ಮ ತಂಡಗಳ ಹೆಸರು ನೋಂದಾಯಿಸಿಕೊಳ್ಳಲು ತಾ. 5 ಕೊನೆಯ ದಿನವಾಗಿದ್ದು, ಜಿಲ್ಲೆಯ ಆಯಾ ಸ್ಥಳಗಳಲ್ಲಿ ಸೂಚಿಸಲಾಗಿರುವ ನೋಂದಾವಣೆ ಕೇಂದ್ರಗಳಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.

ಹಾಕಿ ನಮ್ಮೆಯಲ್ಲಿ ಭಾಗವಹಿಸುವ ತಂಡಗಳಲ್ಲಿ ಹಾಕಿ ಸ್ಟಿಕ್ ಮತ್ತು ಪ್ಯಾಡ್ ಇಲ್ಲದಿದ್ದರೆ ಕುಲ್ಲೇಟಿರ ಹಾಕಿ ನಮ್ಮೆಯ ಆಯೋಜಕರನ್ನು ಸಂರ್ಪಕಿಸಿ ಪಡೆದು ಕೊಂಡು ಆಟದ ನಂತರ ಹಿಂತಿರುಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬಹುದು ಎಂದರು.