ಮಡಿಕೇರಿ, ಏ. 1: ಆಧ್ಯಾತ್ಮಿಕ ಅರಿವು ಮತ್ತು ಸರಿಯಾದ ಮಾರ್ಗದರ್ಶನದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾದ್ಯ ಎಂದು ಎಮ್ಮೆಮಾಡಿನ ಧರ್ಮಗುರು ಸೈಯ್ಯದ್ ಇಲ್ಯಾಸ್ ತಂಞಳ್ ಹೇಳಿದರು. ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿ ಮಡಿಕೇರಿ ಕಾವೇರಿ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗಂಡು, ಹೆಣ್ಣು ಮದುವೆಯ ನಂತರ ದಂಪತಿ ಗಳಾಗಿ ಅನ್ಯೋನ್ಯವಾಗಿ ದಾಂಪತ್ಯ ಜೀವನ ನಡೆಸಿದರೆ ಮಾತ್ರ ಒಂದು ಒಳ್ಳೆಯ ಕುಟುಂಬವೆನಿಸಿಕೊಳ್ಳುತ್ತದೆ. ಯಾವದೇ ಕಾರಣಕ್ಕೂ ಅನ್ಯರ ಸೆಳೆತಕ್ಕೆ ಬಲಿಯಾಗಿ ದಾಂಪತ್ಯದಲ್ಲಿ ದೂರವಾಗ ಬಾರದೆಂದರು.

ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿ ಅಧÀ್ಯಕ್ಷ ಎಫ್.ಎ. ಮಹಮ್ಮದ್ ಹಾಜಿ ಅಧÀ್ಯಕ್ಷತೆ ವಹಿಸಿದ್ದರು. ನಾಪೋಕ್ಲುವಿನ ಧರ್ಮಗುರುಗಳಾದ ಮೊಯಿದ್ದೀನ್ ಕುಟ್ಟಿ ಮಲಾಯಿರಿ ಅವರು ವಿವಾಹದ ಮಹತ್ವದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಸಮುದಾಯದ ಪ್ರಮುಖರಾದ ಹೆಚ್.ಎಂ. ಮಹಮ್ಮದ್ ಫಕೀರ್ ಸಾಬ್, ಮುಹಮ್ಮದ್ ಹಾಜಿ. ಅಬ್ಬಾಸ್ ಹಾಜಿ, ಉಮರ್ ಫೈಜಿó ಇದ್ದರು. ಅಲ್-ಅಮೀನ್ ಕಾರ್ಯದರ್ಶಿ ಎಂ.ಇ. ಮೊಹಿದ್ದೀನ್ ಸ್ವಾಗತಿಸಿ ವಂದಿಸಿದರು.