ಕೂಡಿಗೆ, ಏ. 1: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ತೆರೆಯಲಾಗಿದ್ದ ಕೋಳಿ, ಆಡು ಹಾಗೂ ಹಂದಿ ಮಾಂಸದ ಅಂಗಡಿಗಳಿಗೆ ಗ್ರಾ.ಪಂ. ಅಧ್ಯಕ್ಷರು ಅಭಿವೃದ್ಧಿ ಅಧಿಕಾರಿ ಬೀಗಹಾಕಿಸಿದ ಘಟನೆ ನಡೆದಿದೆ2017-18ನೇ ಸಾಲಿನ ಮಾರ್ಚ್ವರೆಗೆ ಕಳೆದ ಸಾಲಿನಲ್ಲಿ ಟೆಂಡರ್ ಮಾಡಲಾಗಿತ್ತು. ಈ ಸಾಲಿನಲ್ಲಿ ಗ್ರಾಮ ಪಂಚಾಯಿತಿಗೆ ಸರಿಯಾದ ಬಿಡ್ ಬಾರದ ಕಾರಣ ಟೆಂಡರ್ ಅನ್ನು ಮುಂದೂಡಲಾಗಿತ್ತು.
ಆದರೆ, ಹಿಂದಿನ ಟೆಂಡರ್ದಾರರಿಗೆ ಲೈಸೆನ್ಸ್ ಪಡೆಯಲು ಸೂಚಿಸಿ ಗ್ರಾ.ಪಂ. ಸಭೆ ನಡೆಯುವವರೆಗೆ ತಾತ್ಕಾಲಿಕವಾಗಿ ಅಂಗಡಿಯನ್ನು ತಾ. 2 ರ ಬಳಿಕ ತೆರೆಯಲು ಸೂಚನೆ ನೀಡಲಾಗಿತ್ತು. ಆದರೆ ಗ್ರಾ.ಪಂ. ಸದಸ್ಯರಾದ ಹಾಗೂ ಈಗಿರುವ ಮಾಂಸದ ಅಂಗಡಿಯ ಜಾಗ ಮಾಲೀಕ ಮಹೇಸ್ ಅವರು ಇಂದು ಮಾಂಸ ಮಾರಾಟಕ್ಕೆ ಮುಂದಾದಾಗ ಸಾರ್ವಜನಿಕರ ದೂರಿನ ಮೇರೆಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಯಿಷ್ ಅವರು ಆಡಳಿತ ಮಂಡಳಿ ಸಹಕಾರದೊಂದಿಗೆ ಪೊಲೀಸರ ನೆರವಿನಿಂದ ಅಂಗಡಿಗೆ ಬೀಗ ಹಾಕಿಸಿದರು.
ತಾ.1ರಂದು ಗ್ರಾ.ಪಂ.ನವರು ಅಂಗಡಿ ಮುಚ್ಚಿಸಿದ್ದರಿಂದ ಗ್ರಾ.ಪಂ. ಸದಸ್ಯ ಮಹೇಶ್ ಅಂಗಡಿಯಲ್ಲಿದ್ದ ಕೋಳಿಗಳನ್ನು ರಸ್ತೆಗೆ ಎಸೆದ ಘಟನೆಯೂ ನಡೆಯಿತು.