ಮಡಿಕೇರಿ, ಏ. 1: ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಕೊಡಗಿನಲ್ಲಿ ಅಕ್ರಮ ಮದ್ಯ ಮಾರಾಟ ಸಂಬಂಧ ಮಾಹಿತಿಯನ್ನು ಅಬಕಾರಿ ಇಲಾಖೆಗೆ ನೀಡಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ 24 ಗಂಟೆ ಕೆಲಸ ನಿರ್ವಹಿಸಲು ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಈ ಕಂಟ್ರೋಲ್ ರೂಂಗೆ ದೂರು ಸಲ್ಲಿಸಬಹುದಾಗಿದೆ ಎಂದು ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ಖುರ್ಷಿದ ಬೇಗಂ ತಿಳಿಸಿದ್ದಾರೆ.

ಜಿಲ್ಲಾ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಂ) ಅಬಕಾರಿ ಉಪ ಆಯುಕ್ತರ ಕಚೇರಿ 08272-229295, ಖುರ್ಷಿದ್ ಬೇಗಂ (9449597135), ಎ.ಆರ್. ಯಶವಂತ ಕುಮಾರ್ (9449597137). ಮಡಿಕೇರಿ ತಾಲೂಕು ನಿಯಂತ್ರಣ ಕೊಠಡಿ ಅಬಕಾರಿ ಉಪ ಅಧೀಕ್ಷಕರ ಕಚೇರಿ 08272-224773, ಆರ್.ಎಂ. ಚೈತ್ರ (9449597139), ಬಿ.ಎಸ್. ಮೋಹನ್ ಕುಮಾರ್ (8762587371).

ಅಬಕಾರಿ ನಿರಿಕ್ಷಕರ ಕಚೇರಿ ಮಡಿಕೇರಿ ವಲಯ 08272-223368, ಬಿ.ಎಸ್. ಲೋಕೇಶ್ (7619297765). ಸೋಮವಾರಪೇಟೆ ತಾಲೂಕು ನಿಯಂತ್ರಣ ಕೊಠಡಿ ಅಬಕಾರಿ ಉಪ ಅಧೀಕ್ಷಕರ ಕಚೇರಿ 08276-281729 ಎಂ.ಪಿ. ಸಂಪತ್ ಕುಮಾರ್ (9449597136), ಎ.ಆರ್. ಅಪೂರ್ವ (9164024638).

ಅಬಕಾರಿ ನಿರೀಕ್ಷಕರ ಕಚೇರಿ ಸೋಮವಾರಪೇಟೆ ವಲಯ 08276-281729 ಎಂ. ನಟರಾಜ್ (9448073020), ಜಿ.ಆರ್. ಗಣೇಶ್ (9379625192). ವೀರಾಜಪೆಟೆ ತಾಲೂಕು ನಿಯಂತ್ರಣ ಕೊಠಡಿ ಅಬಕಾರಿ ಉಪ ಅಧೀಕ್ಷಕರ ಕಚೇರಿ 08274-256396 ಸಿ. ಲಕ್ಷ್ಮೀಶ (9449597141), ಅಬಕಾರಿ ನಿರೀಕ್ಷಕರ ಕಚೇರಿ ವೀರಾಜಪೆಟೆ ವಲಯ 08274-255720 ಹೆಚ್.ಜಿ. ಶ್ರೀನಿವಾಸ (9449657722) ಇಲ್ಲಿ ದೂರುಗಳನ್ನು ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.