ಮಡಿಕೇರಿ, ಏ. 1: ಕೊಡಗು ಪೊಲೀಸ್ ಇಲಾಖೆಯಿಂದ ತಾ. 2 ರಂದು (ಇಂದು) ಬೆಳಿಗ್ಗೆ 8.30ಕ್ಕೆ ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಏರ್ಪಡಿಸಲಾಗಿದೆ. ಇಲಾಖೆಯ ಉತ್ತಮ ಸೇವೆಗಾಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಟ್ರೋಫಿ ವಿತರಣೆ ಹಾಗೂ ಇತರ ಕಾರ್ಯಕ್ರಮ ಜರುಗಲಿದ್ದು, ನಿವೃತ್ತ ಏರ್‍ಮಾರ್ಷಲ್ ಕೆ.ಸಿ. ಕಾರ್ಯಪ್ಪ, ನಿವೃತ್ತ ಅಧಿಕಾರಿ ಕೆ.ಎಸ್. ಕುಶಾಲಪ್ಪ, ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರಪ್ರಸಾದ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.