ನಾಪೆÇೀಕ್ಲು: ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಬಳಿ ಅಮ್ಮಂಗೇರಿಯಲ್ಲಿ ಶನಿವಾರ ಮುಂಜಾನೆ ಪುದಿಯೋದಿ ದೇವರ ವಾರ್ಷಿಕ ಕೋಲ ವಿಜೃಂಭಣೆಯಿಂದ ನಡೆಯಿತು.

ಮುಂಜಾನೆ ಸೂರ್ಯೋದಯದ ಮಂಜು ಮುಸುಕಿನ ನಡುವೆ ಬರುವ ಕೋಲ, ತನ್ನ ನಾಲ್ಕು ಕಡೆಗಳಲ್ಲಿ ಉರಿಯುತ್ತಿರುವ ಪಂಜು, ಅದಕ್ಕೆ ಭಕ್ತರ ಹರಕೆಯ ತುಪ್ಪ ಮತ್ತು ಎಣ್ಣೆ ಸುರಿಯುವಿಕೆಯಿಂದ ಮೇಲೇಳುವ ಅಗ್ನಿ ಜ್ವಾಲೆ, ಕೋಲದ ಎರಡು ಕೈಯಲ್ಲಿರುವ ಕಾದ ಬಳೆಗಳಿಗೆ ನೀರು ತಾಗಿಸುವಾಗಿನ ಶಬ್ದ ನೋಡುಗರನ್ನು ಭಯಭೀತರನ್ನಾಗಿಸಿತು. ಈ ದೈವವು ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಕಾವಲುಗಾರ ಆಗಿ ನೆಲೆ ನಿಂತು ಊರಿಗೆ ಬರುವ ಮಹಾಮಾರಿ ರೋಗಗಳನ್ನು ತಡೆದು ನಂಬಿದವರನ್ನು ಕಾಪಾಡುವ ದೇವರೆಂದು ಹಿಂದಿನಿಂದಲೂ ನಂಬಿಕೆ ಇದೆ. ಇದರ ಅಂಗವಾಗಿ ಶುಕ್ರವಾರ ರಾತ್ರಿ ಭೀರ, ಭೀರಾಳಿ, ಭದ್ರಕಾಳಿ ದೇವರ ಕೋಲಗಳು ನಡೆದವು.