ಮಡಿಕೇರಿ, ಏ. 1: ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ, ಜಿಲ್ಲಾ ಚುನಾವಣಾಧಿಕಾರಿಗಳ ಆದೇಶದಂತೆ ಬಂದೂಕುಗಳನ್ನು ಹೊಂದಿರುವವರು ತಮ್ಮ ಬಂದೂಕುಗಳನ್ನು ನಗರ ಪೊಲೀಸ್ ಠಾಣೆಯಲ್ಲಿ ಜಮೆಗೊಳಿಸುವಂತೆ ಠಾಣಾಧಿಕಾರಿ ಷಣ್ಮುಖಪ್ಪ ಪ್ರಕಟಣೆಯಲ್ಲಿ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.