ನಾಪೆÇೀಕ್ಲು, ಏ. 1: ಬಡವರನ್ನು ಸಂರಕ್ಷಿಸಿದರೆ ಸಮಾಜಕ್ಕೆ ಒಳಿತಾಗುತ್ತದೆ. ಆದುದರಿಂದ ಬಡವರಿಗೆ ಸಹಕಾರ ನೀಡುವದರೊಂದಿಗೆ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಿ ಎಂದು ಎಮ್ಮೆಮಾಡುವಿನ ಸಯ್ಯದ್ ಇಲಿಯಾಸ್ ತಂಞಳ್ ಅಭಿಪ್ರಾಯಪಟ್ಟರು.

ಚೆರಿಯಪರಂಬು ಶಾದಿ ಮಹಲಿನಲ್ಲಿ ಏರ್ಪಡಿಸಲಾಗಿದ್ದ ಕೊಡಗು ಮುಸ್ಲಿಂ ಒಕ್ಕೂಟದ ವಾಟ್ಸಾಪ್ ಸಂಘಟನೆಯ ವತಿಯಿಂದ ಆಯೋಜಿಸಲಾಗಿದ್ದ ಎರಡನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂತಹ ಕಾರ್ಯಕ್ರಮದಿಂದ ಬಡವರನ್ನು ಮುಖ್ಯ ಸಮಾಜದ ವಾಹಿನಿಗೆ ತರಲು ಸಹಕಾರವಾಗಲಿದೆ. ಎಲ್ಲರಂತೆ ಅವರು ನೆಮ್ಮದಿಯ, ಆಶಾದಾಯಕ ಬದುಕನ್ನು ಕಂಡುಕೊಳ್ಳಲು ಸಾಧ್ಯ ಎಂದರು.

ಜಿಲ್ಲಾ ಖಾಜಿಗಳಾದ ಮಹಮ್ಮದ್ ಮುಸ್ಲಿಯಾರ್ ಹಾಗೂ ಅಬ್ದುಲ್ ಫೈಜೀ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಮಹಮ್ಮದ್ ರಫಿ ವಹಿಸಿದ್ದರು.

ಈ ಸಂದರ್ಭ ವಧು ವರರಿಗೆ ಚಿನ್ನದ ಆಭರಣವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಹಮೀದ್ ಕೊಟ್ಟಮುಡಿ, ನಾಸೀರ್‍ಮಕ್ಕಿ, ರಜಾಕ್ ಕುಂಜಿಲ, ಬಶೀರ್ ಹಾಜಿ, ಅಶ್ರಫ್ ಸೋಮವಾರಪೇಟೆ, ಅಸೀಫ್, ಜೈನ್ನುದ್ದೀನ್ ಮತ್ತಿತರರು ಇದ್ದರು.