ಮಡಿಕೇರಿ, ಏ. 1: ಮುಸ್ಲಿಂ ಸ್ಪೋಟ್ರ್ಸ್ ಅಸೋಸಿಯೇಷನ್ ಮತ್ತು ತ್ಯಾಗ್‍ಬಾಯ್ಸ್ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟ ಇಂದು ತೆರೆಕಂಡಿತು.ಒಟ್ಟು 132 ತಂಡಗಳು ಪಾಲ್ಗೊಂಡಿದ್ದ ಪಂದ್ಯಾವಳಿಯಲ್ಲಿ ವೀರಾಜಪೇಟೆ ಬ್ಲ್ಯಾಕ್ ಕೋಬ್ರಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಕುಶಾಲನಗರ ತಾಜ್ ಬಾಯ್ಸ್ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಮೊದಲ ಸ್ಥಾನ ಪಡೆದ ತಂಡಕ್ಕೆ 55,555 ರೂ. ನಗದು ಮತ್ತು ಟ್ರೋಫಿ, (ಮೊದಲ ಪುಟದಿಂದ) ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 33,333 ರೂ. ನಗದು ಮತ್ತು ಟ್ರೋಫಿ ವಿತರಿಸಲಾಯಿತು. ಪಂದ್ಯ ಪುರುಷೋತ್ತಮನಾಗಿ ತಾಜ್ ತಂಡದ ಸಲ್ಮಾನ್, ಸರಣಿ ಶ್ರೇಷ್ಠನಾಗಿ ಕೋಬ್ರಾ ತಂಡ ನಾಸಿರ್ ಪ್ರಶಸ್ತಿ ಪಡೆದರು. ಸಮಾರೋಪ ಸಮಾರಂಭಕ್ಕೆ ಅತಿಥಿಗಳಾಗಿ ಪ್ರೆಸ್‍ಕ್ಲಬ್ ಅಧ್ಯಕ್ಷ ರಮೇಶ್ ಕುಟ್ಟಪ್ಪ, ನಗರಸಭಾ ಸದಸ್ಯ ಅಮಿನ್ ಮೊಯ್ಸಿನ್, ವಕೀಲ ಕುಂಞಬ್ದುಲ್ಲಾ, ಕಸಾಪ ಮಾಜಿ ಗೌರವ ಕಾರ್ಯದರ್ಶಿ ಷಂಶುದ್ದೀನ್, ಅಸೋಸಿಯೇಷನ್ ಸ್ಥಾಪಕಾಧ್ಯಕ್ಷ ರಶೀದ್ ಎಡಪಾಲ, ಅಧ್ಯಕ್ಷ ಖಾದರ್ ಮತ್ತಿತರರು ಪಾಲ್ಗೊಂಡಿದ್ದರು.