ವೀರಾಜಪೇಟೆ, ಏ. 1: ಪ್ರತಿಯೊಂದು ಸಮುದಾಯದಲ್ಲಿಯೂ ಆಚಾರ ವಿಚಾರ ಸಂಸ್ಕøತಿ ಎಂಬುದು ಭಿನ್ನವಾಗಿದ್ದರೂ, ಧಾರ್ಮಿಕ ಭಾವನೆಗಳು ಒಂದೇ ಆಗಿವೆ. ಸಮಾಜದಲ್ಲಿ ಜಾತ್ಯತೀತತೆಯು ನೆಮ್ಮದಿಯ ಸಮಾಜಕ್ಕೆ ತಳಹದಿಯಾಗಲಿದೆ ಎಂದು ಅಖಿಲ ಭಾರತ ಸುನ್ನಿ ಉಲಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು.

ಕಡಂಗದ ಪ್ರತಿಷ್ಠಿತ ಬದ್ರಿಯ ಶಿಕ್ಷಣ ಸಂಸ್ಥೆಯ ಅಧೀನದಲಿ ರೂ. ಒಂದು ಕಾಲುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಎರಡು ಅಂತಸ್ತಿನ ಆಧುನಿಕ ಬದ್ರಿಯಾ ಮಸೀದಿ ಕಟ್ಟಡವನ್ನು ಉದ್ಘಾಟಿಸಿದ ಅವರು ಪ್ರತಿಯೊಬ್ಬರಲ್ಲೂ ಧಾರ್ಮಿಕತೆಯ ಭಾವನೆಗಳಿದ್ದರೆ ಶಾಂತಿಯೊಂದಿಗೆ ಸುವ್ಯವಸ್ಥಿತ ಸಮಾಜದ ನಿರ್ಮಾಣ ವೀರಾಜಪೇಟೆ, ಏ. 1: ಪ್ರತಿಯೊಂದು ಸಮುದಾಯದಲ್ಲಿಯೂ ಆಚಾರ ವಿಚಾರ ಸಂಸ್ಕøತಿ ಎಂಬುದು ಭಿನ್ನವಾಗಿದ್ದರೂ, ಧಾರ್ಮಿಕ ಭಾವನೆಗಳು ಒಂದೇ ಆಗಿವೆ. ಸಮಾಜದಲ್ಲಿ ಜಾತ್ಯತೀತತೆಯು ನೆಮ್ಮದಿಯ ಸಮಾಜಕ್ಕೆ ತಳಹದಿಯಾಗಲಿದೆ ಎಂದು ಅಖಿಲ ಭಾರತ ಸುನ್ನಿ ಉಲಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು.

ಕಡಂಗದ ಪ್ರತಿಷ್ಠಿತ ಬದ್ರಿಯ ಶಿಕ್ಷಣ ಸಂಸ್ಥೆಯ ಅಧೀನದಲಿ ರೂ. ಒಂದು ಕಾಲುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಎರಡು ಅಂತಸ್ತಿನ ಆಧುನಿಕ ಬದ್ರಿಯಾ ಮಸೀದಿ ಕಟ್ಟಡವನ್ನು ಉದ್ಘಾಟಿಸಿದ ಅವರು ಪ್ರತಿಯೊಬ್ಬರಲ್ಲೂ ಧಾರ್ಮಿಕತೆಯ ಭಾವನೆಗಳಿದ್ದರೆ ಶಾಂತಿಯೊಂದಿಗೆ ಸುವ್ಯವಸ್ಥಿತ ಸಮಾಜದ ನಿರ್ಮಾಣ ಸಹ ಸಂಚಾಲಕ ಯು.ಇ. ರಾಶೀದ್ ವಂದಿಸಿದರು.

ಸ್ನೇಹ ಕೂಟ: ಕಡಂಗದಲ್ಲಿ ಆಧುನಿಕ ಮಸೀದಿಯ ಉದ್ಘಾಟನೆ ಹಾಗೂ ಸಾರ್ವಜನಿಕ ಮಹಾ ಸಮ್ಮೇಳನವನ್ನು ಬೆಳಿಗ್ಗೆ 10 ಗಂಟೆಗೆ ಉದಾರ ದಾನಿಗಳಾದ ಎಂ.ಟಿ.ಪಿ. ಸಯ್ಯದ್ ಮುಹಿಯ್ಯುದ್ದೀನ್ ಹಾಜಿ ಧ್ವಜಾರೋಹಣದೊಂದಿಗೆ ಚಾಲನೆ ನೀಡಿದರು.

ಸಂಜೆ ನಡೆದ ಸ್ನೇಹ ಕೂಟದಲ್ಲಿ ಕಾಫಿ ಬೆಳೆಗಾರರಾದ ವಿನೋದ್ ನಾಣಯ್ಯ, ಮಣಿ ಅಯ್ಯಮ್ಮ, ಚಾತಂಡ ಗಿರಿ, ಬಲ್ಲಚಂಡ ಟಿಟ್ಟು ಅತಿಥಿಗಳಾಗಿ ಭಾಗವಹಿಸಿದ್ದರು.

ಎಸ್.ಎಸ್.ಎಫ್.ನ ರಾಷ್ಟ್ರೀಯ ಕಾರ್ಯದರ್ಶಿ ಮೋಂಟುಗೊಳಿ ಅಬೂಬಕ್ಕರ್ ಸಿದ್ದೀಕ್ ಧಾರ್ಮಿಕ ಒಗ್ಗಟ್ಟಿನ ಕುರಿತು ಮಾತನಾಡಿದರು.

ಸ್ವಾಗತ ಸಮಿತಿಯ ಅಧ್ಯಕ್ಷ ಎಂ.ಎ. ಅಬೂಬಕ್ಕರ್, ಸಿ.ಎ. ನಿಸಾರ್ ಸಖಾಫಿ, ಅಬ್ದುಲ್ ಜಲೀಲ್ ಸಖಾಫಿ, ಸಿ.ಎ. ಮಹಮ್ಮದ್ ಕುಂಜ್ಞಿ ಮೊದಲಾದವರು ಹಾಜರಿದ್ದರು.