ವೀರಾಜಪೇಟೆ, ಏ. 1: ವೀರಾಜಪೇಟೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿಸಂಸ್ಥೆ ವತಿಯಿಂದ 24ನೆ ವರ್ಷದ ಹಾಕಿ ತರಬೇತಿ ಶಿಬಿರ ತಾ. 4 ರಿಂದ 20 ರವರೆಗೆ ವೀರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ನಡೆಯಲಿದೆ. ನುರಿತ ತರಬೇತುದಾರರಿಂದ ಬಾಲಕ-ಬಾಲಕಿಯರಿಗೆ ತರಬೇತಿ ನೀಡಲಾಗುವದು.

ಆಸಕ್ತ ಬಾಲಕ-ಬಾಲಕಿಯರು ಈ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಕಾರ್ಯದರ್ಶಿ ಸಂಪಿ ಪೂಣಚ್ಚ ಮೊ. 9482246390 ಸಂಪರ್ಕಿಸಬಹುದು.