ಪೊನ್ನಂಪೇಟೆ, ಏ. 2: ಶ್ರೀಮಂಗಲದ ಮುಖ್ಯ ರಸ್ತೆಯ ಬದಿ ನೂತನವಾಗಿ ಆರಂಭಗೊಂಡಿರುವ ‘ಶ್ರೀಮಂಗಲ ಮೀನು ಅಂಗಡಿ’ಯಲ್ಲಿ ಸೋಮವಾರದಂದು 22 ಕೆ.ಜಿ.ತೂಕದ ಭಾರೀ ಗಾತ್ರದ ಓಲೆ ಮೀನೊಂದು ಗ್ರಾಹಕರ ಗಮನ ಸೆಳೆದಿದೆ.

ಕೇರಳದ ಕಣ್ಣಾನೂರಿನಿಂದ ಲಾರಿಯಲ್ಲಿ ಎಂದಿನಂತೆ ಮಾರುಕಟ್ಟೆಗೆ ಮೀನು ತರಲಾಗಿತ್ತು. ಈ ವೇಳೆ ಶ್ರೀಮಂಗಲದ ಮಾರುಕಟ್ಟೆಗೆ ಮೀನು ಬಂದಾಗ 22 ಕೆ.ಜಿ ತೂಕದ ಓಲೆ ಮೀನು ಜನರ ಅಚ್ಚರಿಗೆ ಕಾರಣವಾಯಿತು. ಮಾರುಕಟ್ಟೆಗೆ ಭಾರೀ ಗಾತ್ರದ ಮೀನು ಬಂದಿರುವ ಸುದ್ದಿ ತಿಳಿದ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದರು. ಕೆ.ಜಿ.ಯೊಂದಕ್ಕೆ ರೂ.380 ರಂತೆ ಮಾರಾಟಗೊಂಡ ಈ ಮೀನು ಕೇವಲ ಒಂದು ತಾಸಿನೊಳಗೆ ಗ್ರಾಹಕರ ಪಾಲಾಯಿತು.