ಗುಡ್ಡೆಹೊಸೂರು, ಏ. 2: ಹಿತರಕ್ಷಣಾ ಯೂತ್ ಕ್ಲಬ್ ವತಿಯಿಂದ ನಡೆದ ಮುಕ್ತ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾಟದಲ್ಲಿ ವಾಲಿಬಾಲ್ ಪ್ರಥಮ ಬಹುಮಾನವನ್ನು ಬೆಂಗಳೂರಿನ ಸಂತೋಷ್ ಫ್ರೆಂಡ್ಸ್ ತಂಡ ಪಡೆಯಿತು. ದ್ವಿತೀಯ ಸ್ಥಾನವನ್ನು ಮಂಗಳೂರಿನ ನಿತ್ಯ ಫ್ರೆಂಡ್ಸ್ ತಂಡದವರು ಪಡೆದರೆ ತೃತೀಯ ಸ್ಥಾನವನ್ನು ಹೆಚ್.ವೈ.ಸಿ. ತಂಡ ಪಡೆಯಿತು.ಥ್ರೋಬಾಲ್ ಪ್ರಥಮ ಸ್ಥಾನವನ್ನು ಕೂರ್ಗ್‍ಗಲ್ಸ್ ಸುಣ್ಣದಕೆರೆ ತಂಡ ಪಡೆದರೆ ದ್ವಿತೀಯ ಸ್ಥಾನವನ್ನು ಮೈಸೂರು ತಂಡ ಗಳಿಸಿತು. ಗುಡ್ಡೆಹೊಸೂರಿನ ಲತಾ ಫ್ರೆಂಡ್ಸ್ ತಂಡ ತೃತೀಯ ಬಹುಮಾನ ಪಡೆಯಿತು.

- ಗಣೇಶ್ ಕುಡೆಕ್ಕಲ್