ಮಡಿಕೇರಿ, ಏ. 4: ಕಾಫಿ ಮಂಡಳಿಯು ಉತ್ಕøಷ್ಟ ಗುಣಮಟ್ಟವುಳ್ಳ ಕಾಫಿ ಉತ್ಪಾದನೆಯನ್ನು ಉತ್ತೇಜಿಸಲು ಈ ವರ್ಷವೂ “ಪ್ಲೇವರ್ ಆಫ್ ಇಂಡಿಯ ದಿ ಫೈನ್ ಕಪ್ ಅವಾರ್ಡ್ ಕಪ್ಪಿಂಗ್ ಕಾಂಪಿಟಿಶನ್ 2018” ನ್ನು ಬೆಳಗಾರರಿಗೋಸ್ಕರ ನಡೆಸಲಿದೆ. ಭಾಗವಹಿಸಲು ಇಚ್ಛಿಸುವವರು ಯಾವದೇ ಸ್ಪರ್ಧಾ ಶುಲ್ಕವಿಲ್ಲದೆ ಕಾಫಿ ಮಾದರಿಯೊಂದಿಗೆ ತಮ್ಮ ಹೆಸರುಗಳನ್ನು ನೋಂದಾಯಿಸಲು ಅವಕಾಶವಿದೆ.

ಈ ಸ್ಪರ್ಧೆಯು ಅರೇಬಿಕಾ ಪ್ಲಾಂಟೆಷನ್ ಬಲ್ಕ್ ಕಾಫಿ, ಅರೇಬಿಕಾ ಚೆರ್ರಿ ಬಲ್ಕ್ ಕಾಫಿ, ರೋಬಸ್ಟ ಪಾಚ್ಮೆಂಟ್ ಬಲ್ಕ್ ಕಾಫಿ, ರೋಬಷ್ಟ ಚೆರ್ರಿ ಬಲ್ಕ್ ಕಾಫಿ ಮತ್ತು ವಿಶೇಷ ಕಾಫಿ (ಮಾನ್‍ಸೂನ್‍ಡ್ ಮಲಬಾರ್, ಎಮ್‍ಎನ್‍ಇಬಿ, ರೋಬಸ್ಟ ಕಾಫಿ ರಾಯಲ್ ವಿಭಾಗಗಳಿಗಾಗಿ ನಡೆಯಲಿದೆ. ಒಂದು ಟನ್ನಿನಷ್ಟು ಕಾಫಿ ಬೀಜವು ದೊರೆಯಲು ಬೇಕಾಗುವ ಸಂಸ್ಕರಣೆಗೊಳಪಡದ ಪಾರ್ಚಮೆಂಟ್ ಕಾಫಿ (1200 ಕೆಜಿ) ಅಥವಾ ಚೆರ್ರಿ ಕಾಫಿ (2100 ಕೆಜಿ) ಯನ್ನು ಲೈಸನ್ಸ್ ಪಡೆದಿರುವ ಕಾಫಿ ಕ್ಯೂರಿಂಗ್ ಗೋದಾಮಿನಲ್ಲಿ ಶೇಖರಣೆ ಮಾಡಿರಬೇಕು. ಶೇಖರಿಸಿದ ಕಾಫಿಯಿಂದ, 11.5 ಕೆಜಿ ಶುದ್ದ ಕಾಫಿ ಮಾದರಿಯನ್ನು ಕಾಫಿ ಮಂಡಳಿಯ ಹಿರಿಯ-ಕಿರಿಯ ಸಂಪರ್ಕಾಧಿಕಾರಿಗಳ ಸಮ್ಮುಖದಲ್ಲಿ ತಯಾರಿಸಿ ಸಲ್ಲಿಸಬಹುದಾಗಿದೆ.

ಕಾಫಿ ಮಾದರಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಲು ತಾ.10 ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕಾಫಿ ಮಂಡಳಿಯ ವೆಬ್‍ಸೈಟ್ ತಿತಿತಿ.iಟಿಜiಚಿಛಿoಜಿಜಿee.oಡಿg ಅಥವಾ ಹತ್ತಿರದ ಕಾಫಿ ಮಂಡಳಿಯ ಹಿರಿಯ-ಕಿರಿಯ ಸಂಪಕಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದು.