ಗೋಣಿಕೊಪ್ಪ ವರದಿ, ಏ. 4: ನಿಟ್ಟೆ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ವಿಟಿಯು ಬೋನಸ್ ಹಾಕಿ ಪಂದ್ಯಾವಳಿಯಲ್ಲಿ ಪೊನ್ನಂಪೇಟೆಯ ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಮಹಿಳಾ ಹಾಕಿ ತಂಡ ಜಯಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಮೊದಲನೇ ಪಂದ್ಯದಲ್ಲಿ ಆತಿಥೇಯ ನಿಟ್ಟೆ ವಿರುದ್ಧ 2-0 ಗೋಲುಗಳಿಂದ ಜಯಗಳಿಸಿತು. ದ್ವಿತೀಯ ಪಂದ್ಯದಲ್ಲಿ ದಾರವಾಡ ಎಸ್.ಡಿ.ಎಮ್.ಸಿ.ಇ. ವಿರುದ್ಧ2-0 ಗೋಲುಗಳ ಅಂತರದಲ್ಲಿ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ಬಳ್ಳಾರಿ ಕೆ.ಎಲ್.ಇ ವಿರುದ್ದ 3-0 ಗೋಲುಗಳಿಂದ ಜಯಗಳಿಸಿತು.