ಸೋಮವಾರಪೇಟೆ, ಏ. 4: ಸಮೀಪದ ಗಾಂಧಿನಗರದಲ್ಲಿರುವ ಶ್ರೀದೊಡ್ಡಮಾರಿಯಮ್ಮ ದೇವಾಲಯದ ವಾರ್ಷಿಕ ಮಹಾ ಪೂಜೋತ್ಸವ ತಾ. 10 ಮತ್ತು 11 ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ದುರ್ಗೇಶ್ ತಿಳಿಸಿದ್ದಾರೆ.

ತಾ. 10ರಂದು ಬೆಳಿಗ್ಗೆ 4 ಗಂಟೆಗೆ ಹೋಮ, 9 ಗಂಟೆಗೆ ಚಪ್ಪರ ಪೂಜೆ, ಸಂಜೆ 5 ಗಂಟೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಿ ವಿಗ್ರಹದ ಮೆರವಣಿಗೆ ನಡೆಯಲಿದೆ. ತಾ. 11ರಂದು ಬೆಳಿಗ್ಗೆ 11 ಗಂಟೆಗೆ ಜ್ಯೋತಿ ಕಾರ್ಯಕ್ರಮ, ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿದ್ದು, ತಾ. 13ರಂದು ಸಂಜೆ 5 ಗಂಟೆಗೆ ಶಾಂತಿ ಪೂಜೆ ಜರುಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.