ಮಡಿಕೇರಿ, ಏ. 4: ಇಲ್ಲಿನ ಶ್ರೀ ಸುಬ್ರಹ್ಮಣ್ಯ - ಮುತ್ತಪ್ಪ ಪರಿವಾರ ದೈವಗಳ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ 7.30 ರಿಂದ ದೇವತಾ ಕೈಂಕರ್ಯಗಳು ಗಣಹೋಮದೊಂದಿಗೆ ಆರಂಭ ಗೊಂಡಿತ್ತು 8 ಗಂಟೆಗೆ ಕಲಶಪೂಜೆ, 10 ಗಂಟೆಗೆ ಕಲಶಾಭಿಷೇಕ, ಶ್ರೀ ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ ಬಳಿಕ ಮಹಾ ಮಂಗಳಾರತಿ ನೆರವೇರಿತು. ಪೂಜಾ ಕೈಂಕರ್ಯ ಗಳನ್ನು ಕೇರಳದ ಕಡಂಬನಾಡು ಪಾರ್ಥಸಾರಥಿ ಸ್ಕಂದನ್ ತಂತ್ರಿಗಳ ನೇತೃತ್ವದೊಂದಿಗೆ ನಡೆಸಿಕೊಟ್ಟರು. ದೇವಾಲಯ ಸಮಿತಿ ಪದಾಧಿಕಾರಿಗಳು, ಸದ್ಭಕ್ತರು ಪಾಲ್ಗೊಂಡಿದ್ದರು.
ಇಂದಿನ ಕಾರ್ಯಕ್ರಮ : ತಾ. 5ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ನಾಗದೇವರಿಗೆ ತಂಬಿಲ ಸೇವೆಯೊಂದಿಗೆ ಸಂಜೆ 5.30 ರಿಂದ ಇತರ ದೇವತಾ ಕೈಂಕರ್ಯಗಳು ಜರುಗಲಿದೆ.