ಮಡಿಕೇರಿ, ಏ. 5: ಕರ್ನಾಟಕ ರಾಜ್ಯ ಬಿಜೆಪಿ ಯುವ ಮೋರ್ಚಾದಿಂದ ರಾಜ್ಯದೆಲ್ಲೆಡೆ ಕಾಂಗ್ರೆಸ್ ಸರಕಾರದ ದುರಾಡಳಿತ ವಿರುದ್ಧ ಜಾಗೃತಿಯೊಂದಿಗೆ, ಕರುನಾಡ ಯುವ ಜಾಗೃತಿ ಯಾತ್ರೆ ನಡೆಯುತ್ತಿದ್ದು, ಇಂದು ನಗರದಲ್ಲಿ ಚಾಲನೆಗೊಂಡಿತು. ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಳನ ರವಿ, ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ಎಪಿಎಂಸಿ ಅಧ್ಯಕ್ಷ ಕಾಂಗೀರ ಸತೀಶ್, ತಾ.ಪಂ. ಉಪಾಧ್ಯಕ್ಷ ಸಂತು ಸುಬ್ರಮಣಿ ಮೊದಲಾದವರು ಹಾಜರಿದ್ದು, ಇಲ್ಲಿನ ಜ. ತಿಮ್ಮಯ್ಯ ವೃತ್ತದಲ್ಲಿ ಚಾಲನೆ ನೀಡಿದರು.

ದ್ವಿಚಕ್ರ ವಾಹನಗಳಲ್ಲಿ ಸಾಗಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ವಿರುದ್ಧ ದುರಾಡಳಿತ, ಭ್ರಷ್ಟಾಚಾರ, ತುಷ್ಠೀಕರಣ, ಕಾನೂನು ಕುಸಿತ, ಕೃಷಿ ಬಿಕ್ಕಟ್ಟು ಮುಂತಾದ ಗುರುತರ ಆರೋಪಗಳಿರುವ ಕರಪತ್ರ ವಿತರಣೆಯೊಂದಿಗೆ ಜನಜಾಗೃತಿ ಹಮ್ಮಿಕೊಂಡಿದ್ದರು.

ನಗರದಿಂದ ಮೇಕೇರಿ, ಹಾಕತ್ತೂರು, ಮೂರ್ನಾಡು, ನಾಪೋಕ್ಲು, ಬಲ್ಲಮಾವಟಿ, ಭಾಗಮಂಡಲ, ಚೇರಂಬಾಣೆ, ಬೆಟ್ಟಗೇರಿ ಮಾರ್ಗವಾಗಿ ಜಾಥಾ ಮರಳಿ ಜಿಲ್ಲಾ ಕೇಂದ್ರದಲ್ಲಿ ಸಮಾಪನಗೊಂಡಿತು.

ತಾ. 28ರಿಂದ ಇದುವರೆಗೆ ರಾಜ್ಯದೆಲ್ಲೆಡೆ ಆಯೋಜಿಸಿದಂತೆ ಇಂದು ಜಿಲ್ಲಾ ಯುವ ಮೋರ್ಚಾದಿಂದ ಜಾಗೃತಿ ಮೂಡಿಸಲಾಯಿತೆಂದು ಕಾರ್ಯದರ್ಶಿ ಎ.ಪಿ. ಧನಂಜಯ ತಿಳಿಸಿದರು. ನೂರಾರು ಯುವಕರು ಕರಪತ್ರ ಹಂಚುವದರೊಂದಿಗೆ ಕರುನಾಡ ಜಾಗೃತಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ನಾಪೆÇೀಕ್ಲುವಿನಲ್ಲಿ ...

ನಾಪೆÇೀಕ್ಲು : ಕಾಂಗ್ರೆಸ್ ಸರಕಾರದ ದುರಾಡಳಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಡೆಸಲಾಗುತ್ತಿರುವ ಕರುನಾಡ ಯುವ ಜಾಗೃತಿ ಯಾತ್ರೆಯ ಬೈಕ್ ಜಾಥಾಕ್ಕೆ ನಾಪೆÇೀಕ್ಲು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ನಾಪೆÇೀಕ್ಲುವಿನಲ್ಲಿ ಭವ್ಯ ಸ್ವಾಗತ ನೀಡಿದರು.

ಜಾಥಾದಲ್ಲಿ ಮಡಿಕೇರಿ ತಾಲೂಕು ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.