ಮಡಿಕೇರಿ, ಏ. 5: ಹಲವಾರು ಪವಾಡಗಳಿಂದ ಪ್ರಸಿದ್ಧವಾದ ಮಡಿಕೇರಿ ಸಮೀಪದ ಬಿಳಿಗೇರಿಯ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಫಕೀರ್ ಭಾವ ಶಾ ವಲಿಯುಲ್ಲಾಹ್ ಅವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಅನ್ನು ಈ ಬಾರಿ ತಾ. 8, 9 ಮತ್ತು 10 ರಂದು ಆಚರಿಸಲು ತೀರ್ಮಾನಿಸಲಾಗಿದೆ.

ತಾ.8 ರಂದು ಹಾಕತ್ತೂರಿನ ಬದರ್ ಜಮಾಅತ್‍ನ ಅಧ್ಯಕ್ಷ ಪಿ.ಎಂ. ಅಬ್ದುಲ್ಲ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದ್ದು, ಮಗ್‍ರಿಭ್ ನಮಾಜ್ ನಂತರ ಜಮ್ಮಾ ಮಸೀದಿಯ ಖತೀಬ ಅಶ್ರಫ್ ಸಖಾಫಿ ನೇತೃತ್ವದಲ್ಲಿ 7 ಗಂಟೆಗೆ ಮಖಾಂ ಅಲಂಕಾರ ಮತ್ತು ಝಿಯಾರತ್ ನಡೆಯಲಿದೆ. ಅಲ್ಲದೆ ಅಂದು ರಾತ್ರಿ 8 ಗಂಟೆಗೆ ಸಯ್ಯದ್ ಮುಹ್ಸಿನ್ ಸೈದಲವಿ ಕೋಯ ತಂಙಳ್ ಬಾಯರ್(ಕುಂಜಿಲ ತಂಙಳ್) ಅವರ ನೇತೃತ್ವದಲ್ಲಿ ದಿಕ್ರ್‍ಹಲ್ಕ ಮತ್ತು ದುಹಾ ಮಜ್ಲಿಸ್ ನಡೆಯಲಿದೆ.

ತಾ.9 ರಂದು ಅಪರಾಹ್ನ 3 ಗಂಟೆಗೆ ಮೌಲೂದ್ ಪಾರಾಯಣ ಮತ್ತು ಸಂಜೆ 5 ಗಂಟೆಗೆ ಅನ್ನದಾನ ನಡೆಯಲಿದೆ. ಅಂದು ರಾತ್ರಿ 8 ಗಂಟೆಗೆ ಸುಫ್‍ಯಾನ್ ಸಖಾಫಿ ಕಾಟಿಪಳ್ಳ ಅವರು ಧಾರ್ಮಿಕ ಪ್ರವಚನ ನೀಡಲಿದ್ದಾರೆ. ತಾ. 10 ರಂದು ರಾತ್ರಿ 8 ಗಂಟೆಗೆ ಹಾಕತ್ತೂರು ಖತೀಬರಾದ ಅಶ್ರಫ್ ಸಖಾಫಿ ತರುವಣ ಮತ ಪ್ರವಚನ ಮಾಡಲಿದ್ದಾರೆ.