ಚೆಟ್ಟಳ್ಳಿ, ಏ. 5: ಕ್ರೋಢನಾಡ್ ಕೊಡವ ಮಕ್ಕಡ ಕೂಟದವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಕಾಲೇಜು ಪದವಿ ವಿಭಾಗದ ಮಕ್ಕಳ ನಡುವಿನ ಅಂತರ ಕಾಲೇಜು ಹಾಕಿ ಫೆÉಸ್ಟ್ - 2018 ತಾ. 8 ರಂದು ಹಾಕಿ ಕೂರ್ಗ್ ಸಂಸ್ಥೆಯ ಸಹಯೋಗದಲ್ಲಿ ನಡೆಯಲಿದೆ ಎಂದು ಕ್ರೋಢ ನಾಡ್ ಕೊಡವ ಮಕ್ಕಡ ಅಧ್ಯಕ್ಷ ಕೇಚಂಡ ರಂಜನ್ ಮಂದಣ್ಣ ತಿಳಿಸಿದ್ದಾರೆ.ಪೂರ್ವಾಹ್ನ 9 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಮೂರ್ನಾಡು ಕಾಲೇಜಿನ ದೈಹಿಕ ಶಿಕ್ಷಕ ಕಂಬೀರಂಡ ಬೋಪಣ್ಣ ಹಾಕಿ ಕೂರ್ಗ್‍ನ ಕಾರ್ಯದರ್ಶಿ ಬುಟ್ಟಿಯಂಡ ಚಂಗಪ್ಪ ಉದ್ಘಾಟಿಸು ವರು. ಸಂಜೆ 4ಕ್ಕೆ ನಡೆಯುವ ಸಮಾರೊಪ ಸಮಾರಂಭದಲ್ಲಿ ಕೊಡವ ವiಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹಾಗು ಚಾಮರ್ಸ್ ಕ್ಲಬ್‍ನ ಸಂಸ್ಥಾಪಕ ಕಲ್ಲ್‍ಮಾಡಂಡ ನವೀನ್, ಮುಖ್ಯ ಅತಿಥಿಗಳಾಗಿ ಭಾಗವಹಿಸ ಲಿರುವರು.ಜಿಲ್ಲಾ ಮಟ್ಟದ ಅಂತರ ಕಾಲೇಜಿನ ಈ ಹಾಕಿ ಪಂದ್ಯಾಟದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ತಾ. 7ರ ಸಂಜೆ ಒಳಗಡೆ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಅಧ್ಯಕ್ಷ ಕೇಚಂಡ ರಂಜನ್ ಮಂದಣ್ಣ (9483650483) ಅಥವಾ ಅಚ್ಚಾಂಡಿರ ಅಯ್ಯಪ್ಪ (7760688862) ಅವರನ್ನು ಸಂಪರ್ಕಿಸಬಹುದಾಗಿದೆ.