ಮಡಿಕೇರಿ, ಏ. 5: ವಾಂಡರರ್ಸ್ ಕ್ಲಬ್ ಹಾಗೂ ಮ್ಯಾನ್ಸ್ ಹಾಕಿ ಅಕಾಡೆಮಿ ಆಶ್ರಯದಲ್ಲಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ ಯೋಗ, ವ್ಯಾಯಾಮ, ಹಾಕಿಯೊಂದಿಗೆ ಚಿತ್ರಕಲೆ ಹಾಗೂ ಕೈಬರಹ ತರಬೇತಿಯನ್ನೂ ಕೂಡ ಉಚಿತವಾಗಿ ನೀಡಲಾಗುತ್ತಿದೆ. ವಾಂಡರರ್ಸ್ ಕ್ಲಬ್‍ನ ಬಾಬು ಸೋಮಯ್ಯ ಅವರ ಉಸ್ತುವಾರಿಯಲ್ಲಿ ತರಬೇತುದಾರರಾದ ಲಕ್ಷ್ಮಣ್‍ಸಿಂಗ್, ಶ್ಯಾಂ, ಅಯ್ಯಪ್ಪ, ಮುದ್ದಯ್ಯ, ಯೋಗ ಶಿಕ್ಷಕ ವೆಂಕಟೇಶ್ ಅವರುಗಳು ಕ್ರೀಡೆ, ವ್ಯಾಯಾಮ, ಯೋಗ ತರಬೇತಿ ನೀಡುತ್ತಿದ್ದು, ಚಿತ್ರಕಲಾ ಶಿಕ್ಷಕಿ ಪ್ರಮೀಳ ಅವರು ಚಿತ್ರಕಲೆ ಹಾಗೂ ಕೈಬರಹ ತರಬೇತಿ ನೀಡುತ್ತಿದ್ದಾರೆ. ಶಿಬಿರಾರ್ಥಿಗಳಲ್ಲದೆ, ಆಸಕ್ತಿ ಇರುವ ಎಲ್ಲರೂ ಕೂಡ ಭಾಗವಹಿಸಬಹುದಾಗಿದೆ. ಬೆಳಿಗ್ಗೆ 8.30 ರಿಂದ 9.30 ರವರೆಗೆ ಈ ತರಬೇರಿ ನಡೆಯಲಿದೆ.