ಮಡಿಕೇರಿ, ಏ. 5: ಬಿ.ಎಸ್.ಪಿ.ಯಿಂದ ಕೊಡಗಿನ ಜೆ.ಡಿಎಸ್. ಅಭ್ಯರ್ಥಿಗಳಾದ ಮಾಜಿ ಸಚಿವ ಬಿ.ಎ. ಜೀವಿಜಯ ಹಾಗೂ ಜಿಲ್ಲಾ ಜೆ.ಡಿಎಸ್. ಅಧ್ಯಕ್ಷ ಸಂಕೇತ್ ಪೂವಯ್ಯ ಇವರುಗಳಿಗೆ ಪೂರ್ಣ ಬೆಂಬಲ ವ್ಯಕ್ತಗೊಂಡಿದೆ. ತಾ. 5 ರ “ಶಕ್ತಿ”ಯಲ್ಲಿ ಬಿಎಸ್.ಪಿ. ಅಭ್ಯರ್ಥಿಯೊಬ್ಬರು ಪ್ರತ್ಯೇಕವಾಗಿ ಸ್ಪರ್ಧಿಸಲಿದ್ದಾರೆ ಎಂದು ತಪ್ಪಾಗಿ ಪ್ರಕಟಗೊಂಡಿದೆ.

ಬಿ.ಎಸ್.ಪಿ.ಯ ಕೊಡಗು ಘಟಕದ ಅಧ್ಯಕ್ಷ ಹೆಚ್.ಎಸ್. ಪ್ರೇಂ ಕುಮಾರ್ ಅವರು ಈ ಕುರಿತು “ಶಕ್ತಿ”ಗೆ ಹೇಳಿಕೆ ನೀಡಿದ್ದು ಕೊಡಗಿನಲ್ಲಿ ಜೆ.ಡಿ.ಎಸ್. (ಮೊದಲ ಪುಟದಿಂದ) ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಬಿ.ಎಸ್.ಪಿ. ಕಾರ್ಯಕರ್ತರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಅಭ್ಯರ್ಥಿಗಳ ಗೆಲವಿನ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರ ರಚನೆಯಾಗುವ ಸಾಧ್ಯತೆಯಿದೆ. ಯಾವ ಪಕ್ಷಗಳೂ ಸರಳ ಬಹುಮತ ಪಡೆಯಲು ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಾಗದು ಎಂದು ಅವರು ಅಭಿಪ್ರಾಯಪಟ್ಟರು. ಆದರೆ, ನಾಯಕತ್ವ ವಿಚಾರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಂದಿದ್ದು ಮುಂದಿನ ಮುಖ್ಯಮಂತ್ರ್ರಿಯಾಗುವ ವಾತಾವರಣ ಕಂಡು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು. 10 ವರ್ಷಗಳಲ್ಲಿ ಬಿ.ಜೆ.ಪಿ. ಹಾಗೂ ಕಾಂಗ್ರೆಸ್ ಆಡಳಿತವನ್ನು ಜನ ಗಮನಿಸಿದ್ದಾರೆ. ಮುಂದೆ ಜೆ.ಡಿ.ಎಸ್. ಆಡಳಿತದ ನಿರೀಕ್ಷೆಯಲ್ಲಿದ್ದು ಈ ಪಕ್ಷಕ್ಕೆ ಬಿ.ಎಸ್.ಪಿ. ಬೆಂಬಲ ಬಲ ತುಂಬಲಿದೆ ಎಂದು ಅವರು ದೃಢ ನಿಲುವು ವ್ಯಕ್ತಪಡಿಸಿದರು.