ಭಾಗಮಂಡಲ, ಏ. 5: ಇಲ್ಲಿಗೆ ಸಮೀಪದ ಅಂಬ್ರಾಟಿ ಬಾಣೆಯಲ್ಲಿ ಯುವತಿಯರೊಂದಿಗೆ ಯುವಕರಿಬ್ಬರು ಇದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗಮಂಡಲ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೋ ಚಿತ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಪಬ್ಲಿಕ್ ಟಿವಿಯಲ್ಲಿ ಪ್ರಸಾರಗೊಂಡ ಸುದ್ದಿ ವೀಡಿಯೋ ಆಧರಿಸಿ ಠಾಣಾಧಿಕಾರಿ ಪುಟ್ಟರಾಜಯ್ಯ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರ ಹೆಸರಿನೊಂದಿಗೆ ಇತರರು ಎಂದು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.