ಮಡಿಕೇರಿ, ಏ. 5 : ಹೊದವಾಡದ ಆಜಾದ್ ನಗರದ ಹೈದ್ರೋಸ್ ಜುಮಾ ಮಸೀದಿ ವತಿಯಿಂದ ತಾ. 8 ಮತ್ತು 9 ರಂದು ಸ್ವಲಾತ್ ವಾರ್ಷಿಕೋತ್ಸವÀ ಹಾಗೂ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಸೀದಿಯ ಸಹ ಕಾರ್ಯದರ್ಶಿ ಮುಹಮ್ಮದ್ ಸಿನಾನ್ ಮಾತನಾಡಿ, ತಾ. 8 ರಂದು ಸಂಜೆ 4.30ಕ್ಕೆ ಜನಾಬ್ ಕೆ.ಎ. ಯೂಸುಫ್ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದು, ಉದ್ಘಾಟನೆಯನ್ನು ಆಜಾದ್ ನಗರದ ಸದರ್ ಮುಅಲ್ಲಿಂ ಹಸ್ಸನ್ ಸಅದಿ ಅಲ್ ಕಾಮಿಲಿ ನೆರವೇರಿಸಲಿದ್ದಾರೆ. ಖತೀಬರಾದ ಅಬ್ದುಲ್ ಹಕೀಂ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ತಾ. 9 ರಂದು ಮಧ್ಯಾಹ್ನ ದ್ಸಿಖ್ರ್ ಹಲ್ಖ ಹಾಗೂ ಸಾರ್ವಜನಿಕ ಸಮ್ಮೇಳನ ಮತ್ತು ಶಾದಿ ಮಹಲ್ ಉದ್ಘಾಟನೆ ನಡೆಯಲಿದ್ದು, ಖಾಝಿ ವಳಪಟ್ಟಣಂ ಬಹು ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ ನೇತೃತ್ವ ವಹಿಸಲಿದ್ದಾರೆ. ಸಮ್ಮೇಳನದ ಉದ್ಘಾಟನೆಯನ್ನು ಕೊಂಡಂಗೇರಿ ಕೆ.ಡಿ.ಎಂ.ಒ. ಪ್ರಾಂಶುಪಾಲರಾದ ಸಿ.ಪಿ. ಅಬ್ದುಲ್ ಮಜೀದ್ ಮದನಿ ನೇರವೇರಿಸಲಿದ್ದು, ಜಾಲ್ಸೂರ್ ಜುಮ್ಮಾ ಮಸ್ಜಿದ್‍ನ ಖತೀಬರಾದ ಅಬೂಬಕರ್ ಫೈಝಿ ಕುಂಬಡಾಜೆ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಅಂದು ರಾತ್ರಿ ಮತ ಪ್ರಭಾಷಣ ನಡೆಯಲಿದ್ದು, ಉದ್ಘಾಟನೆಯನ್ನು ಕೆ.ಆರ್.ಐ.ಡಿ.ವಿ.ಎಸ್. ಪ್ರಧಾನ ಕಾರ್ಯದರ್ಶಿ ಶಾದುಲಿ ಪೈಝಿ ಉದ್ಘಾಟಿಸಲಿದ್ದಾರೆ. ಶಾಖಿರ್ ಬಾಖವಿ ಮಂಬಾಡ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಸೀದಿಯ ಅಧ್ಯಕ್ಷ ಕೆ.ಎ. ಯೂಸುಫ್ ಹಾಜಿ, ಉಪಾಧ್ಯಕ್ಷ ಬಿ.ಎ. ಸುಲೈಮಾನ್, ಸದಸ್ಯರಾದ ಅಬ್ದುಲ್ ಖಾದರ್ ಹಾಗೂ ಹನೀಫ್ ಝೈನಿ ಉಪಸ್ಥಿತರಿದ್ದರು.