ಕುಶಾಲನಗರ, ಏ. 6: ಮಂಗಳೂರು ವಿವಿಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಆಶ್ರಯದಲ್ಲಿ ವಚನ ಚಳುವಳಿ ಮತ್ತು ಅಂಬಿಗರ ಚೌಡಯ್ಯನ ವಚನಗಳ ಪ್ರಸ್ತುತತೆಯ ಅನುಸಂಧಾನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾ. 7 ರಂದು (ಇಂದು) ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲರಾದ ಪಿ.ಎಂ.ಸುಬ್ರಮಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.