ಮಡಿಕೇರಿ, ಏ. 6 : ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಸಂಘದ ವಾರ್ಷಿಕೋತ್ಸವ, ಜನಾಂದೋಲನ ಸಮಾವೇಶ, ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ತಾ.8 ಹಾಗೂ 16 ರಂದು ನಡೆಯಲಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹೆಚ್.ಎಂ. ಸೋಮಪ್ಪ, ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ತಾ.8 ರಂದು ಮಾದಾಪುರದ ಡಿ. ಚೆನ್ನಮ್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಪÀÅರುಷರಿಗಾಗಿ ಕ್ರಿಕೆಟ್, ಫುಟ್ಬಾಲ್, ಕಬಡ್ಡಿ, ವಾಲಿಬಾಲ್ ಹಾಗೂ ಓಟದ ಸ್ಪರ್ಧೆಗಳು ನಡೆಯಲಿವೆ. ಮಹಿಳೆಯರಿಗೆ, ಯುವಕ ಯುವತಿಯರಿಗೆ ಹಾಗೂ ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕ್ರೀಡಾ ಪಟುಗಳು ಬೆಳಗ್ಗೆ 9.30ಕ್ಕೆ ಕಾಲೆÉೀಜು ಮೈದಾನದಲ್ಲಿ ಹಾಜರಿರಬೇಕೆಂದು ಸೋಮಪ್ಪ ತಿಳಿಸಿದರು.
ತಾ. 16 ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಜನಾಂದೋಲನ ಸಮಾವೇಶವನ್ನು ಸೋಮವಾರಪೇಟೆ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗುತ್ತಿದೆ. ಅಂದು ಬೆಳಗ್ಗೆ 9.30 ಗಂಟೆಗೆ ಸೋಮವಾರಪೇಟೆಯ ಕಕ್ಕೆ ಹೊಳೆಯಿಂದ ಆದಿ ದ್ರಾವಿಡ ಸಮುದಾಯದ ಬೃಹತ್ ಮೆರವಣಿಗೆ ಕಲ್ಯಾಣ ಮಂಟಪದವರೆಗೆ ನಡೆಯಲಿದೆ ಎಂದು ಸೋಮಪ್ಪ ತಿಳಿಸಿದರು.
ಮತದಾನದ ಹಕ್ಕನ್ನು ಸಂವಿಧಾನ ಶಿಲ್ಪಿ ಬಿ.ಆರ್. ಅಂಬೆÉೀಡ್ಕರ್ ಅವರು ನೀಡಿದ್ದು, ಇವರ ಜಯಂತಿ ಆಚರಣೆ ಸಂದರ್ಭ ಚುನಾವಣಾ ಅಧಿಕಾರಿಗಳು ಅಡ್ಡಿ ಪಡಿಸುವದು ಸರಿಯಲ್ಲ. ರಾಜಕೀಯ ಪಕ್ಷಗಳ ಜಾಥಾ, ಮೆರವಣಿಗೆಗಳಿಗೆ ಅವಕಾಶ ಕಲ್ಪಿಸುತ್ತಿರುವ ಅಧಿಕಾರಿಗಳು ಡಾ.ಅಂಬೇಡ್ಕರ್ ಜಯಂತಿ ಆಚರಣೆಗೆ ಅವಕಾಶ ನೀಡಲು ಹಿಂಜರಿಯುತ್ತಿರುವದು ಯಾಕೆ ಎಂದು ಪ್ರಶ್ನಿಸಿದರು.
ಸುಪ್ರೀಂ ಕೋರ್ಟ್ ಎಸ್‍ಸಿ-ಎಸ್‍ಟಿ ಕಾಯ್ದೆ ಕುರಿತು ಇತ್ತೀಚೆಗೆ ಹೊರಡಿಸಿರುವ ಆದೇಶದ ಬಗ್ಗೆ ಸಮಾವೇಶದಲ್ಲಿ ಹಕ್ಕು ಮಂಡನೆ ಮಾಡಿ ರಾಜ್ಯಪಾಲರಿಗೆ ಮನವಿ ರವಾನಿಸಲಾಗುವದು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನ್ಯಾಯ ಒದಗಿಸುವದಕ್ಕಾಗಿ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರ ಹಳೆಯ ಕಾನೂನನ್ನೇ ಮುಂದುವರಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಪಿ.ಎಲ್.ಸುರೇಶ್, ಪ್ರಮುಖರಾದ ಹೆಚ್.ಎಸ್. ಮಧು, ಮೋಣಪ್ಪ ಹಾಗೂ ಹೆಚ್.ಜಿ.ರವಿ ಉಪಸ್ಥಿತರಿದ್ದರು.