*ಸಿದ್ದಾಪುರ, ಏ. 6: ಇಲ್ಲಿಗೆ ಸಮೀಪದ ನೆಲ್ಯಹುದಿಕೇರಿಯ ಮುತ್ತಪ್ಪ ದೇವಾಲಯದಲ್ಲಿ 25ನೇ ವರ್ಷದ ತೆರೆ ಮಹೋತ್ಸವ ತಾ. 7 ರಂದು (ಇಂದು) ನಡೆಯಲಿದೆ. 6.30ಕ್ಕೆ ಮುತ್ತಪ್ಪ ವೆಳ್ಳಾಟಂ, 8 ಗಂಟೆಗೆ ಭಗವತಿ ತೆರೆ ನಡೆಯಲಿದೆ. ಅನ್ನದಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಉತ್ಸವಕ್ಕೆ ಸೇತುರಾಮನ್ ಚೆಟ್ಟಿಯಾರ್ ಧ್ವಜಾರೋಹಣದೊಂದಿಗೆ ಚಾಲನೆ ನೀಡುವರು ಎಂದು ಸಮಿತಿ ಅಧ್ಯಕ್ಷ ಕಾಳಚಂಡ ಚೀಯಣ್ಣ ತಿಳಿಸಿದ್ದಾರೆ.