ಮಡಿಕೇರಿ, ಏ. 6: ಕೊಡಗು ಜಿಲ್ಲೆಯಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಜಿಲ್ಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.

ಮಡಿಕೇರಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್/ಅಧಿಕಾರಿ ಸುರೇಶ್ ದೂ.ಸಂ;08272-221845/ 6360663516, ಸೋಮವಾರಪೇಟೆ ಗ್ರಾ.ಕು.ನೀ ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ/ಅಧಿಕಾರಿ ರಮೇಶ್ ದೂ.ಸಂ;02876-284422/ 9448523387, ವೀರಾಜಪೇಟೆ ಗ್ರಾ.ಕು.ನಿ ಮತ್ತು ನೈ ಉಪ ವಿಭಾಗ ಪೊನ್ನಂಪೇಟೆಯ ಎಇಇ/ ಅಧಿಕಾರಿ ಲಕ್ಷ್ಮಿಕಾಂತ್ ದೂ.ಸಂ; 08274-261053/ 9900631584, ವಿಭಾಗ ಮಡಿಕೇರಿ ಗ್ರಾ.ಕು.ನೀ ಮತ್ತು ನೈ ಉಪ ವಿಭಾಗದ ಎಇಇ/ ಅಧಿಕಾರಿ ರೇವಣ್ಣ ದೂ.ಸಂ; 08272-228845/ 9448160547 ಸಂಪರ್ಕಿಸಬಹುದಾಗಿದೆ.