ಮಡಿಕೇರಿ, ಏ. 6: ಇಲ್ಲಿನ ಸಿ.ವಿ. ಶಂಕರ ಕ್ರಿಕೆಟ್ ಅಕಾಡೆಮಿ ವತಿಯಿಂದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಮೈದಾನದಲ್ಲಿ ಏರ್ಪಡಿಸಲಾಗಿರುವ ಲೆದರ್‍ಬಾಲ್ ಕ್ರಿಕೆಟ್ ತರಬೇತಿ ಶಿಬಿರಕ್ಕೆ ಇಂದು ಚಾಲನೆ ನೀಡಲಾಯಿತು.

ವಾಂಡರರ್ಸ್ ಕ್ಲಬ್‍ನ ಕಾರ್ಯದರ್ಶಿ ಕೆಎಸ್‍ಸಿಎ ಕೊಡಗು ಸಂಯೋಜಕರಾದ ರಘುಮಾದಪ್ಪ ಶಿಬಿರಕ್ಕೆ ಚಾಲನೆ ನೀಡಿ, ಉತ್ತಮ ರೀತಿಯಲ್ಲಿ ತರಬೇತಿ ಪಡೆದು ಉತ್ತಮ ಆಟಗಾರರಾಗಬೇಕು, ಈಗಾಗಲೇ ಜಿಲ್ಲೆಯ ರಾಬಿನ್ ಉತ್ತಪ್ಪ, ಎನ್.ಸಿ. ಅಯ್ಯಪ್ಪ ಅವರುಗಳು ಭಾರತ ತಂಡವನ್ನು ಪ್ರತಿನಿಧಿಸಿದ್ದು, ಇನ್ನಷ್ಟು ಪಟುಗಳು ಹೊರಹೊಮ್ಮಬೇಕೆಂದರು. ವಿಶೇಷವಾಗಿ ಬಾಲಕಿಯರು ಓರ್ವಳಾದರೂ ರಾಷ್ಟ್ರವನ್ನು ಪ್ರತಿನಿಧಿಸುವಂತಾಗಬೇಕೆಂದು ಹಾರೈಸಿದರು. ಈ ಸಂದರ್ಭ ಶಂಕರ ಕ್ರಿಕೆಟ್ ಅಕಾಡೆಮಿಯ ಯಾಲದಾಳು ಹರೀಶ್, ಬಿ.ಬಿ. ನಂದ, ತರಬೇತುದಾರರಾದ ಯಾಲದಾಳು ಮದನ್, ಯಾಲದಾಳು ಯಶಿನ್, ಹಾಸನದ ಕೆ.ಎಸ್.ಸಿ.ಎ. ತರಬೇತುರರಾದ ಅಶ್ವಿನ್, ಉಡುಪಿ ಡಾ. ಕಿನ್, ಮಂಗಳೂರಿನ ದಿನೇಶ್, ದೈಹಿಕ ಶಿಕ್ಷಣ ನಿರ್ದೇಶಕ ದಾಮೋದರ, ಶಿಬಿರಾರ್ಥಿಗಳು, ಪೋಷಕರು ಹಾಜರಿದ್ದರು.