ಮಡಿಕೇರಿ, ಏ.6 : ಮಡಿಕೇರಿಯ ತ್ಯಾಗರಾಜನಗರದ ದಾರುಲ್ ಹುದಾ ಅರಬಿ ಮದ್ರಸದ ವಾರ್ಷಿಕ ಬದರ್ ಮೌಲೀದ್ ಕಾರ್ಯಕ್ರಮ ತಾ.8ರಂದು ನಡೆಯಲಿದೆ ಎಂದು ಮದ್ರಸದ ಸದಸ್ಯ ಎಂ.ತಮ್ಲೀಖ್ ದಾರಿಮಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬದ್ರಿಯಾ ಜಮಾಅತ್ ಅಧೀನದಲ್ಲಿ ಪ್ರತೀವರ್ಷ ಆಚರಿಸುವ ಬದರ್ ಮೌಲೀದ್ ಕಾರ್ಯಕ್ರಮವನ್ನು ಈ ಬಾರಿ ತಾ.8ರ ಸಂಜೆ 6.30ಕ್ಕೆ ದಾರುಲ್ ಹುದಾ ಅರಬಿ ಮದ್ರಸದ ಆವರಣದಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಎಂ.ಜಿ. ಯೂಸುಫ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೆಚ್.ಎಂ.ಬಾಬಾಜಾನ್ ಉಸ್ತಾದ್ ಅವರು ಪ್ರಾರ್ಥನೆ ನೆರವೇರಿಸಲಿದ್ದು, ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಪಿ.ಐ.ಅಬ್ದುರ್ರಹಮಾನ್ ಸಅದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸೈಯದ್ ಕುಟುಂಬ ಪರಂಪರೆಯ ಹಾಗೂ ಪ್ರಾರ್ಥನೆಯ ಮೂಲಕವೇ ಜನಸಾಮಾನ್ಯರ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುವ ನೇತಾರರಾದ ದುಗ್ಗಲಡ್ಕದ ಶೈಖುನ ಸೈಯದ್ ಝೈನಲ್ ಆಬಿದೀನ್ ತಂಙಳ್ ಅವರು ದುವಾರ್ಶೀವಚನ ಹಾಗೂ ಧಾರ್ಮಿಕ ಹಿತವಚನಗಳನ್ನು ನೀಡಲಿದ್ದು, ಮಡಿಕೇರಿಯ ಭಟ್ಕಳ್ ಮಸೀದಿ, ಎಂ.ಎಂ.ಜಮಾಅತ್, ಬದ್ರಿಯಾ ಜಮಾಅತ್‍ನ ಪ್ರಮುಖರು ಮತ್ತಿತರರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮದ್ರಸದ ಅಧ್ಯಕ್ಷ ಮುಹಮ್ಮದ್ ಆಲಿ, ಪ್ರಧಾನ ಕಾರ್ಯದರ್ಶಿ ಕಲೀಲ್ ಬಾಷ, ಸದಸ್ಯರಾದ ಶಕೀಲ್ ಪಾಷ ಹಾಗೂ ಅಬ್ದುರ್ರಹಮಾನ್ ಉಪಸ್ಥಿತರಿದ್ದರು.