ಮಡಿಕೇರಿ, ಏ. 6: ನಗರದ ಶ್ರೀ ಮುತ್ತಪ್ಪ ದೇವಾಲಯದ ಜಾತ್ರೆಯ ಅಂಗವಾಗಿ ಇಂದು ಗಾಂಧಿ ಮೈದಾನದಿಂದ ಪ್ರಮುಖ ಬೀದಿಗಳಲ್ಲಿ ಮುತ್ತಪ್ಪ ದೇವರ ಕಲಶ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಡಿವೈಎಸ್ಪಿ ಸುಂದರರಾಜ್ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಕೇರಳದ ಪ್ರಸಿದ್ಧ ಕಲಾ ತಂಡಗಳಾದ ಸಿಂಗಾರಿ ಮೇಳ, ಆಕರ್ಷಕ ತೆಯ್ಯಂ ತಾಲಾಪೊಲಿ ಚಂಡೆ,

(ಮೊದಲ ಪುಟದಿಂದ) ಗೊಂಬೆ ಕುಣಿತ, ಬ್ಯಾಂಡ್, ಕೊಡಗಿನ ದುಡಿಕೊಟ್ಟ್ ಗಮನ ಸೆಳೆಯಿತು. ರಾತ್ರಿ 7 ಗಂಟೆಗೆ ಶ್ರೀ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿ ಸ್ಪರ್ಶದೊಂದಿಗೆ ಪೊವ್ವದಿ ವೆಳ್ಳಾಟಂ, ವಿಷ್ಣುಮೂರ್ತಿ ವೆಳ್ಳಾಟಂ, ಶಿವಭೂತ ತೆರೆ, ಗುಳಿಗ ತೆರೆ, ಕುಟ್ಟಿಚಾತನ್ ತೆರೆ, ಕಳಗಪಾಟ್, ಸಂದ್ಯಾವೇಲೆ ನೆರವೇರಿತು.