ಸಿದ್ದಾಪುರ, ಏ. 6 : ದಕ್ಷಿಣ ಕೊಡಗಿನ ಕೊಟ್ಟಗೇರಿ, ಬಾಳೆಲೆ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ಜಾನುವಾರುಗಳನ್ನು ಸಾಯಿಸಿದ ವ್ಯಾಘ್ರನನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಜ್ಜುಗೊಂಡಿದೆ. ಅಲ್ಲದೇ ಹುಲಿಯ ಚಲನ ವಲನ ಕಂಡು ಹಿಡಿಯಲು ಅಳವಡಿಸಿದ್ದ ಟ್ರಾಪ್ ಕ್ಯಾಮರಾದಲ್ಲಿ ಹುಲಿಯ ಚಿತ್ರ ಸೆರೆಯಾಗಿದ್ದು, ಹುಲಿಯು ತೋಟದೊಳಗೆ ಸುತ್ತಾಡುತ್ತಿರುವದು ಖಚಿತಗೊಂಡಿದೆ. ಈ ಹಿನ್ನೆಲೆಯಲ್ಲಿ ತಾ. 7ರಂದು (ಇಂದು) ಬೆಳಿಗ್ಗೆ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಂಪೂರ್ಣ ಸಜ್ಜಾಗಿದೆ. ಕಳೆದ ಕೆಲವು ತಿಂಗಳಿನಿಂದ ಬಾಳೆಲೆ, ನಿಟ್ಟೂರು, ಕೊಟ್ಟಗೇರಿ ವ್ಯಾಪ್ತಿಯ ಹಲವಾರು ಮಂದಿ ರೈತರ ಜಾನುವಾರುಗಳ ಮೇಲೆ ಧಾಳಿ ನಡೆಸಿ ವ್ಯಾಘ್ರ ಅಟ್ಟಹಾಸ ಮೆರೆದಿದೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಸಭೆ ನಡೆಸಿ ತಂತ್ರಗಾರಿಕೆಯ ಮೂಲಕ ಹುಲಿಯನ್ನು ಸೆರೆ ಹಿಡಿಯಲು ಸಾಕಷ್ಟು ಬಾರಿ ಪ್ರಯತ್ನಿಸಿದರೂ, ಹುಲಿಯು ತಪ್ಪಿಸಿಕೊಳ್ಳುತ್ತಿತ್ತು, ಆದರೆ ಈ ಬಾರಿ ಹುಲಿಯನ್ನು ಹೇಗಾದರೂ ಮಾಡಿ ಸೆರೆ ಹಿಡಿಯಬೇಕೆಂದು ಪಣತೊಟ್ಟಿ ರುವ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು, ದ್ರೋಣ, ಕೃಷ್ಣ, ಭೀಮಾ ಈ ನಾಲ್ಕು ಆನೆಗಳೊಂದಿಗೆ ಹುಲಿಯನ್ನು ಹಿಡಿಯಲು 15 ಮಂದಿಯ ವಿಶೇಷ ತಂಡ (ಸ್ಪೆಷಲ್ ಟೈಗರ್ಸ್ ಟೀಂ) ರಚಿಸಿ ಕಾರ್ಯಾಚರಣೆ ನಡೆಸಲು ಸಿದ್ಧವಾಗಿದೆ. ಹುಲಿಯನ್ನು ಸೆರೆ ಹಿಡಿಯುವ ನುರಿತ ಅಧಿಕಾರಿ ವೆಂಕಟೇಶ್ ಹಾಗೂ ವನ್ಯಜೀವಿಯ ವೈದ್ಯಾಧಿಕಾರಿಗಳು ಕಾರ್ಯಾ ಚರಣೆಯಲ್ಲಿ ಪಾಲ್ಗೊಳ್ಳಲಿದ್ದು, ಬೆಳಿಗ್ಗೆ 5 ಗಂಟೆಗೆ ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಕೊಟ್ಟಗೇರಿ ಕಾಫಿ ತೋಟದೊಳಗೆ ಇರಿಸಿ ಬೋನ್ ಒಳಗೆ ಮಾಯಮುಡಿ ಯಲ್ಲಿ ಹುಲಿ ಧಾಳಿ ನಡೆಸಿ ಸಾಯಿಸಿದ ಕರುವಿನ ಮೃತ ದೇಹವನ್ನು ಇಡ ಲಾಗುವದು ಹಾಗೂ ಮೇಕೆ ಯೊಂದನ್ನು ಇಡುವ ಸಾಧ್ಯತೆ ಇದೆಯೆಂದು ತಿಳಿದುಬಂದಿದೆ. ಸಾಕಾನೆಗಳ ನೆರವಿನಿಂದ ಅಂದಾಜು 70 ಎಕ್ರೆ ಪ್ರದೇಶದ ಒಳಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ವಿಶೇಷದಳದವರು ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾರ್ಯಾಚರಣೆಯ ಸಂದರ್ಭದಲ್ಲಿ ಹುಲಿಯು ಸೆರೆ ಸಿಕ್ಕಿದಲ್ಲಿ ಅದನ್ನು ಅರೆವಳಿಕೆ ಔಷಧಿ ಬಳಸಿ ನಂತರ ಬೋನ್ ಮೂಲಕ ಬೇರೆ ಊರಿಗೆ ಸ್ಥಳಾಂತರ ಮಾಡುವದಾಗಿ ತಿಳಿದುಬಂದಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ. ಕಾರ್ಯಾಚರಣೆ ಯಲ್ಲಿ ಒಟ್ಟು 30 ಮಂದಿ ಭಾಗವಹಿಸಲಿದ್ದಾರೆ. ಒಂದು ವೇಳೆ ಕಾರ್ಯಾಚರಣೆ ತಂಡಕ್ಕೆ ಹುಲಿಯು ಸಿಗದಿದ್ದಲ್ಲಿ ಮರುದಿನವು ಕೂಡ ಕಾರ್ಯಾಚರಣೆ ನಡೆಸುವದಾಗಿ ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.ವೀರಾಜಪೇಟೆ ಡಿ.ಸಿ.ಎಫ್ ಮರಿಯ ಕ್ರಿಸ್ತರಾಜ್ ಮಾರ್ಗದರ್ಶ ನದಲ್ಲಿ ಎ.ಸಿ.ಎಫ್. ಶ್ರೀಪತಿ, ಆರ್.ಎಫ್.ಓ. ಗಂಗಾಧರ್, ಅಶೋಕ್ ಹಾಗೂ ಸಿಬ್ಬಂದಿಗಳು ಕಾರ್ಯಾ ಚರಣೆ ಯಲ್ಲಿ ಭಾಗವಹಿಸಲಿ ದ್ದಾರೆ. - ವರದಿ ವಾಸು