ಮಡಿಕೇರಿ, ಏ. 7 : ಕಡಂಗ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮಸೀದಿಯೊಂದರ ಉದ್ಘಾಟನಾ ಸಮಾರಂಭದಲ್ಲಿ ಮಸೀದಿ ಅಧ್ಯಕ್ಷರಾಗಿರುವ ಮತ್ತು ಸ್ಥಳೀಯ ಮದ್ರಸದ ಅಧ್ಯಾಪಕರಾಗಿರುವ ಕೇರಳದ ವ್ಯಕ್ತಿ ಜಲೀಲ್ ಎಂಬವರು ಪ್ರಚೋದನಕಾರಿ ಭಾಷಣ ಮಾಡಿದ್ದು, ಇವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆÉಂದು ಕಡಂಗದ ಮೊಹಿಯುದ್ದೀನ್ ಜುಮಾ ಮಸೀದಿ ಹಾಗೂ ಎಸ್‍ಕೆಎಸ್‍ಎಸ್‍ಎಫ್ ಸಂಘÀಟನೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಲೀಲ್ ಅವರು ಗ್ರಾಮದಲ್ಲಿ ಒಡಕು ಮೂಡಿಸುವ ಪ್ರಚೋದನಕಾರಿ ಭಾಷಣ ಮಾಡಿದ್ದು, ಇದರಿಂದ ಯುವ ಸಮೂಹ ಸಹನೆ ಕಳೆದುಕೊಳ್ಳುವ ಸಾಧ್ಯತೆಗಳಿದೆ ಎಂದು ಆತಂಕ ವ್ಯಕ್ತÀಪಡಿಸಿದರು. ಜಲೀಲ್ ಅವರ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಅಸಮಾಧಾನ ಹೊಗೆಯಾಡುತ್ತಿದೆ. ಈ ಬಗ್ಗೆ ಜಲೀಲ್ ಅವರ ವಿರುದ್ಧ ಈಗಾಗಲೆ ವೀರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದರು.
ಗ್ರಾಮಸ್ಥರ ಕ್ಷಮೆ ಕೋರಲು ಎಂಟು ದಿನಗಳ ಗಡುವು ನೀಡಲಾಗಿತ್ತಾದರು ಇಲ್ಲಿಯವರೆಗೆ ಬಹಿರಂಗ ಕ್ಷಮೆ ಯಾಚಿಸದ ಅವರು, ಖಾಲಿ ಕಾಗದದ ಮೇಲೆ ಬರವಣಿಗೆ ರೂಪದಲ್ಲಷ್ಟೆ ಸಮಜಾಯಿಷಿಕೆ ನೀಡಿದ್ದಾರೆ. ಗ್ರಾಮದಲ್ಲಿ ಶಾಂತಿ ನೆಲೆಸಬೇಕಾದರೆ ಜಲೀಲ್ ಅವರು ಬಹಿರಂಗ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ ಪ್ರಮುಖರು ಕೇರಳದಿಂದ ಕಡಂಗಕ್ಕೆ ಬಂದು ಒಡಕು ಮೂಡಿಸುತ್ತಿರುವ ಇವರನ್ನು ಗಡಿಪಾರು ಮಾಡುವದು ಸೂಕ್ತವೆಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಕಡಂಗದ ಮುಹಿಯುದ್ದೀನ್ ಜುಮಾ ಮಸೀದಿಯ ಕಾರ್ಯದರ್ಶಿ ಪಿ.ಎ. ಅಬ್ದುಲ್ ರೆಹೆಮಾನ್, ಮಾಜಿ ಕಾರ್ಯದರ್ಶಿ ಪಿ.ಎ. ಅಬ್ದುಲ್ ಹಾಜಿ, ಎಸ್‍ಕೆಎಸ್‍ಎಸ್‍ಎಫ್ ಕಡಂಗ ಶಾಖೆಯ ಅಧ್ಯಕ್ಷ ಪಿ.ಹೆಚ್. ಶಮೀರ್, ಕಾರ್ಯದರ್ಶಿ ಪಿ.ಎ. ಇಕ್ಬಾಲ್, ಖಜಾಂಚಿ ಕೆ.ಕೆ. ಸಮ್ಮದ್ ಹಾಗೂ ಸಹ ಕಾರ್ಯದರ್ಶಿ ಟಿ.ಎಂ. ರಶೀಂ ಉಪಸ್ಥಿತರಿದ್ದರು.