ಭಾಗಮಂಡಲ, ಏ. 7: ಇಲ್ಲಿಗೆ ಸಮೀಪದ ಚೆಟ್ಟಿಮಾನಿಯಲ್ಲಿ ಜರುಗಿದ 25 ನೇ ವರ್ಷದ ಕೆದಂಬಾಡಿ ಕ್ರಿಕೆಟ್ ಪಂದ್ಯಾಟದಲ್ಲಿ ದಂಬೆಕೋಡಿ ತಂಡವು ಅತಿಥೇಯ ಕೆದಂಬಾಡಿ ತಂಡವನ್ನು ಸೋಲಿಸುವದರೊಂದಿಗೆ ಪ್ರಶಸ್ತಿ ಗಳಿಸಿತು. ಇಂದು ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆದಂಬಾಡಿ ತಂಡವು 8 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿತು. ದಂಬೆಕೋಡಿ ತಂಡವು 9 ವಿಕೆಟ್‍ನಷ್ಟಕ್ಕೆ 86 ರನ್ ಗಳಿಸಿ ಜಯಸಾಧಿಸಿತು. ಇದಕ್ಕೂ ಮೊದಲು ಕೆದಂಬಾಡಿ ಮತ್ತು ಪರ್ಲಕೋಟಿ ತಂಡಗಳ ನಡುವೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪರ್ಲಕೋಟಿ ತಂಡವು ಆರು ವಿಕೆಟ್ ನಷ್ಟಕ್ಕೆ 77 ರನ್ ಕಲೆ ಹಾಕಿತು. ಕೆದಂಬಾಡಿ ತಂಡವು 2 ವಿಕೆಟಿಗೆ 80 ರನ್ ಮಾಡಿ ಫೈನಲ್ ಪ್ರವೇಶಿಸಿತು. ಪರ್ಲಕೋಟಿ ತಂಡವು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಪುದಿಯನೆರವನ ಮತ್ತು ದಂಬೆಕೋಡಿ ತಂಡಗಳ ನಡುವೆ (ಮೊದಲ ಪುಟದಿಂದ) ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಂಬೆಕೋಡಿ ತಂಡವು ಐದು ವಿಕೆಟಿಗೆ 43 ರನ್ ಗಳಿಸಿದರೆ ಪುದಿನೆರವನ ತಂಡವು 9 ವಿಕೆಟ್ ನಷ್ಟಕ್ಕೆ 32 ರನ್ ಗಳಿಸಿ 4ನೇ ಸ್ಥಾನ ಪಡೆಯಿತು. ದಂಬೆಕೋಡಿ ತಂಡ ಫೈನಲ್ ಪ್ರವೇಶಿಸಿತು. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಲಾಯಿತು.
ಪ್ರಶಸ್ತಿ ವಿಜೇತರು : ಬೆಸ್ಟ್ ಬ್ಯಾಟ್ಸ್‍ಮನ್ ಆಗಿ ಮುಕುಂದ ಪಾಣತ್ತಲೆ, ಬೆಸ್ಟ್ ಬೌಲರ್ ಆಗಿ ಕೀಕಿ ಕೆದಂಬಾಡಿ, ಬೆಸ್ಟ್ ಮ್ಯಾನ್ ಆಫ್ ದ ಸೀರಿಸ್ ಆಗಿ ಕಾರ್ತಿಕ್ ದಂಬೆಕೋಡಿ, ಬೆಸ್ಟ್ ಮ್ಯಾನ್ ಆಫ್ ದ ಮ್ಯಾಚ್ ಆಗಿ ಕೀರ್ತನ್ ದಂಬೆಕೋಡಿ, ಆಲ್‍ರೌಂಡರ್ ಆಗಿ ಆಕಾಶ್ ಕೆದಂಬಾಡಿ ಹೊರ ಹೊಮ್ಮಿದರು.