ಮಡಿಕೇರಿ, ಏ. 7: : ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಸ್ಥಳೀಯವಾಗಿ ಕರ್ತವ್ಯ ನಿರ್ವಹಿಸು ವಂತಿಲ್ಲ ಎಂಬ ನಿಯಮವಿದ್ದರೂ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಸ್ಥಳೀಯರೇ ಆಗಿದ್ದು, ಚುನಾವಣೆ ಸಂದರ್ಭದಲ್ಲಿ ಪ.ಪಂ. ಮುಖ್ಯಾಧಿ ಕಾರಿಯಾಗಿ ಕಾರ್ಯನಿರ್ವಹಿಸುತ್ತಿ ರುವ ಬಗ್ಗೆ ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ಚುನಾವಣಾ ಆಯೋಗ ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆದಿರುವ ಅಶೋಕ್ ಅವರು, ಆಯಾಯಾ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳೀಯ ಅಧಿಕಾರಿ ಗಳನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಆದರೆ ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಹಾಗೂ ಅವರ ಕುಟುಂಬದ ವರು ಕುಶಾಲನಗರ ಪ.ಪಂ. ವ್ಯಾಪ್ತಿಯ ಕರಿಯಪ್ಪ ಬಡಾವಣೆಯಲ್ಲಿ 367/1 ಸಂಖ್ಯೆಯ ಮನೆಯಲ್ಲಿ ವಾಸವಾಗಿದ್ದು, ಮತದಾರ ಕ್ಷೇತ್ರ ಭಾಗದ ಸಂಖ್ಯೆ 172ರಲ್ಲಿ ಇವರ ಹೆಸರಿದ್ದು, ಮತದಾನ ಚೀಟಿಯ ಸಂಖ್ಯೆ 164UಖಿZ3630068 ಇದಾಗಿದೆ. ಶ್ರೀಧರ್ ಪತ್ನಿ ಹೆಸರೂ ಇದೇ ಮತದಾರರ ಪಟ್ಟಿಯಲ್ಲಿದೆ. ಆದರೂ ಕುಶಾಲನಗರದಲ್ಲೇ ಕರ್ತವ್ಯದಲ್ಲಿ ಮುಂದುವರಿದಿದ್ದು, ಚುನಾವಣಾ ಕರ್ತವ್ಯಕ್ಕೆ ಸೆಕ್ಟರ್ ಅಧಿಕಾರಿಯನ್ನಾಗಿಯೂ ನಿಯೋಜಿಸಲಾಗಿದೆ.
ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಶ್ರೀಧರ್ ಅವರನ್ನು 2006ರಲ್ಲಿ ನಿಯೋಜನೆ ಮೇರೆಗೆ ಒಂದು ವರ್ಷದ ಅವಧಿಗೆ ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಯನ್ನಾಗಿ ವರ್ಗಾಯಿಸಲಾಗಿತ್ತು. ಆದರೆ ಅವರು ಚುನಾವಣೆ ಸಂದರ್ಭ ದಲ್ಲೂ ಮುಂದುವರಿದಿರುವ ದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗಿದೆ ಎಂದು ಅಶೋಕ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.