ಚಿತ್ರ ವರದಿ: ವಾಸು ಸಿದ್ದಾಪುರ, ಏ. 7 : ಎತ್ತಲೂ ದೂಳು, ಕರ್ಕಶ ಸದ್ದಿನೊಂದಿಗೆ ಗರ್ಜಿಸುತ್ತಾ ಮುನ್ನುಗ್ಗುತ್ತಿದ್ದ ಸಾಲು ಸಾಲು ಬೈಕುಗಳು. ಇದು ಸಿದ್ದಾಪುರದಲ್ಲಿ ನಡೆದ ರಾಜ್ಯಮಟ್ಟದ ಬೈಕ್ ರ್ಯಾಲಿಯಲ್ಲಿ ಕಂಡು ಬಂದ ದೃಶ್ಯ. ಸಿದ್ಧಾಪುರದ ಕಾಫಿ ಬೆಳೆಗಾರರಾದ ಸಿ.ಕೆ. ಪೂವಯ್ಯ ಅವರ ಗದ್ದೆಯಲ್ಲಿ ಶನಿವಾರ ಮುಂಜಾನೆಯಿಂದಲೇ ಎಲ್ಲೆಲ್ಲೂ ಬೈಕ್‍ಗಳದ್ದೇ ಗರ್ಜನೆ. ಇಷ್ಟು ದಿನ ಆನೆ ಗರ್ಜನೆಯಿಂದ ಬೇಸತ್ತಿದ್ದ ಇಲ್ಲಿನ ಜನತೆಗೆ ಇಂದು ಬೈಕ್‍ಗಳ ಸದ್ದು ತುಸು ನಿರಾಳತೆಯನ್ನು ನೀಡಿತು. (ಮೊದಲ ಪುಟದಿಂದ) ಹವ್ಯಾಸಿ ರ್ಯಾಲಿ ಪಟುಗಳು ಹಾಗೂ ಟೀಮ್ 53 ಅಡ್ವೆಂಚರ್ಸ್ ಕೂರ್ಗ್ ಮೋಟರ್ಸ್ ಸ್ಪೋಟ್ರ್ಸ್ ಸಹಯೋಗ ದಲ್ಲಿ ಸಿದ್ದಾಪುರದ ಕಾವೇರಿ ನದಿ ಸಮೀಪದ ಗದ್ದೆಯಲ್ಲಿ ರ್ಯಾಲಿ ಆಯೋಜಿಸಿತ್ತು. ಜಿಲ್ಲೆಯ ವಿವಿಧೆಡೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಬೈಕ್ ಸವಾರರು ಬಂದಿದ್ದರು. ನೂರಾರು ರ್ಯಾಲಿ ಅಭಿಮಾನಿಗಳು ನೆರೆದು ಬೈಕ್ ಸವಾರರಿಗೆ ಸ್ಪೂರ್ತಿ ನೀಡಿ ಉತ್ತೇಜಿಸಿದರು.
ನಾಮುಂದು ತಾಮುಂದು ಎಂದು ಜೀವವನ್ನೂ ಲೆಕ್ಕಿಸದೆ ಸವಾರರು ಬೈಕ್ ಹಾರಿಸಿ ಮುಂದೆ ಸಾಗುತ್ತಿದ್ದರೆ, ಇತ್ತ ಪ್ರೇಕ್ಷಕರು ಕಿರುಚಿ, ಶಿಳ್ಳೆ ಹೊಡೆದು ಹುರಿದುಂಬಿಸುತ್ತಿದ್ದ ದೃಶ್ಯ ಕಂಡು ಬಂತು. ಬಹುತೇಕ ಯುವಕರ ದಂಡೇ ರ್ಯಾಲಿ ಪ್ರದೇಶವನ್ನು ಸುತ್ತುವರಿದಿತ್ತು.
ಬೈಕ್‍ಗಳನ್ನು ತಾಂತ್ರಿಕ ಗುಣಮಟ್ಟವನ್ನು ಹೆಚ್ಚಿಸಿಕೊಂಡು ತಮಗೆ ಬೇಕಾದ ಕರ್ಕಶ ಶಬ್ದ, ವಿನ್ಯಾಸವನ್ನು ಬದಲಿಸಿಕೊಂಡಿದ್ದ ಸವಾರರು, ತಾವು ಹೇಳಿದಂತೆ ಕೇಳುವಂತೆ ಬೈಕನ್ನು ಮಾರ್ಪಡಿಸಿ ಕೊಂಡಿದ್ದರು. ಮುಂಬದಿಯ ಬೈಕ್ ಸವಾರರು ಎಬ್ಬಿಸಿದ ದೂಳಿನಲ್ಲಿ ಇತ್ತ ರಸ್ತೆ ಕಾಣದಿದ್ದರೂ ಅದನ್ನೂ ಲೆಕ್ಕಿಸದ ಸವಾರರು ದೂಳಿನಲ್ಲೇ ಮುನ್ನುಗ್ಗುತ್ತಿದ್ದ ದೃಶ್ಯ ಎದೆ ಝಲ್ಲೆನ್ನುವಂತೆ ಮಾಡಿತು.
ಇತ್ತ ಸೈಕಲ್ ಓಡಿಸುವ ಸಣ್ಣ ಮಕ್ಕಳು ಕೂಡ ಬೈಕ್ ಕ್ರೇಜಿಗೆ ಬಿದ್ದು, ಆತ ಓಡಿಸುವದು ಸರಿಯಿಲ್ಲ, ಹೀಗೆ ಓಡಿಸಿದರೆ ಸರಿಯಿತ್ತು ಎಂದು ಎಲ್ಲವೂ ತಿಳಿದವರಂತೆ ಮಾತನಾಡುತ್ತಿದ್ದ ಚಿಣ್ಣರನ್ನು ಕಂಡು