ವೀರಾಜಪೇಟೆ, ಏ.7: ಪಂದ್ಯಾಟಗಳು ಯುವಕರು ಅನ್ಯ ಚಟುವಟಿಕೆಗಳಿಂದ ದೂರವಿರುವಂತೆ ಮಾಡಿ ಉತ್ತಮ ಹಾದಿಯಲ್ಲಿ ಸಾಗುವಂತೆ ಮಾಡಿರುವದು ಸಂತಸ. ಈ ಪಂದ್ಯಾಟಗಳಿಂದ ಯುವ ಜನತೆ ಇಂದು ಶಾಂತಿ ಸೌಹಾರ್ದತೆ ಕಡೆ ಸಾಗುತ್ತಿರುವದು ಇತರರಿಗೂ ಮಾದರಿಯಾಗಲಿ ಎಂದು ಮಡಿಕೇರಿಯ ವಕೀಲ ಕುಂಞಬ್ದುಲ ಹೇಳಿದರು.

ವೀರಾಜಪೇಟೆಯ ತಾಲೂಕು ಮೈದಾನದಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಷಿಯೇಶನ್ ವತಿಯಿಂದ ಅಯೋಜಿಸಿದ್ದ 10 ನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಹೊನಲು ಬೆಳಕಿನ ವಾಲಿಬಾಲ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

ಕೊಡವ ಮುಸ್ಲಿಂ ಅಸೋಷಿಯೇಶನ್‍ನ ಅಧ್ಯಕ್ಷ ಸೂಫಿ ಹಾಜಿ ಮುಖ್ಯ ಅತಿಥಿಗಳಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಸಮಾರಂಭದ ಅಧ್ಯಕ್ಷತೆಯನ್ನು ಅಸೋಷಿಯೇಶನ್ ಅಧ್ಯಕ್ಷ ಪಿ.ಎ. ಅನೀಫ್ ವಹಿಸಿಸಿದ್ದು , ಮೊದಲಿಗೆ ಧ್ವಜಾರೋಹಣ ಮಾಡಿದರು. ಈ ಸಮಾರಂಭದಲ್ಲಿ ಮುಖ್ಯ ಅಥಿಗಳಾಗಿ ಬಲ್ಲಚಂಡ ಗೌತಮ್, ಉದ್ಯಮಿ ಎಡಪಾಲದ ಹ್ಯಾರೀಸ್, ಸಂಸ್ಥೆಯ ಕಾರ್ಯಧ್ಯಕ್ಷ ಕರೀಂ, ಕಾರ್ಯದರ್ಶಿ ಇಸ್ಮಾಯಿಲ್, ಸದಸ್ಯರಾದ ಹಂಸ, ಎಂ.ವೈ. ಅಲಿ, ಸುಬೇರ್, ಹಂಸ ಹಾಗೂ ವಿ.ಪೇ iÁಟೋ ಲಿಂಕ್ಸ್ ಮಾಲೀಕ ಕಬೀರ್, ನಾಪೋಕ್ಲುವಿನ ಮನ್ಸೂರ್ ಆಲಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.