ಮಡಿಕೇರಿ, ಏ. 8: ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕೊಡವಕೇರಿಯ 12ನೇ ವರ್ಷದ ಮಹಾಸಭೆ ಕೇರಿಯ ಅಧ್ಯಕ್ಷ ನಾಯಕಂಡ ಬ್ರೌನ್ ಕುಂಜ್ಞಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕ್ಯಾಪಿಟಲ್ ವಿಲೇಜ್ನಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕೇರಿಯ ಮಾಜಿ ಕಾರ್ಯದರ್ಶಿ ಕಾಣತಂಡ ಅಯ್ಯಪ್ಪ ಮಾತನಾಡಿದರು. ಚೋಳಪಂಡ ಎಂ.ವಿಜಯ ಅವರು ಲೆಕ್ಕಪತ್ರ ಮಂಡಿಸಿದರು. ಕೇರಿಯ ಸದಸ್ಯರುಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು. ಬೊಳ್ಳಜಿರ ಅಯ್ಯಪ್ಪ ಕಾರ್ಯಕ್ರಮ ನಿರೂಪಿಸಿ, ಯಮುನಾ ಅಯ್ಯಪ್ಪ ಕ್ರೀಡಾಕೂಟವನ್ನು ನಿರ್ವಹಿಸಿ, ರೇಖಾತಮ್ಮಯ್ಯ ವಂದಿಸಿದರು. ವಿವಿಧ ಪೈಪೋಟಿಗಳಲ್ಲಿ ಸ್ಪರ್ಧಿಗಳು ಗಮನ ಸೆಳೆದರು. ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.