ಗೋಣಿಕೊಪ್ಪಲು,ಏ.8: ಸರಕಾರದ ಯಾವದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಗೋಣಿಕೊಪ್ಪಲು ಪೆÇಲೀಸರು ಕ್ರಮ ಜರುಗಿಸಿದ್ದಾರೆ.ಚುನಾವಣೆ ಹಿನ್ನೆಲೆ ಗೋಣಿಕೊಪ್ಪಲು ಪೆÇಲೀಸ್ ಉಪನಿರೀಕ್ಷಕ ಸುಬ್ಬಯ್ಯ ಮತ್ತು ಸಿಬ್ಬಂದಿಗಳು ಇಲ್ಲಿನ ಸೆಸ್ಕ್ (ಕೆಇಬಿ) ಇಲಾಖೆಯ ಮುಂಭಾಗ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ ಶನಿವಾರ ರಾತ್ರಿ 8.15ಕ್ಕೆ ಕೆ.ಎ.12-ಪಿ.3192 ಇಂಡಿಗೋ ಕಾರಿನಲ್ಲಿ ಯಾವದೇ ಸರ್ಕಾರದ ಅಧಿಕೃತ ಪರವಾನಗಿ ಇಲ್ಲದೆ, ರೂ.4,580 ಮೌಲ್ಯದ ಸುಮಾರು 96 ಕ್ವಾರ್ಟರ್ ವಿಸ್ಕಿ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಅರುವತ್ತೊಕ್ಕಲು ನಿವಾಸಿ ವಿ.ಆರ್.ಪ್ರಶಾಂತ್ ಎಂಬವನ ಮೇಲೆ ಕರ್ನಾಟಕ ಅಬಕಾರಿ ಕಾಯ್ಧೆ 188 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.