ನಾಪೆÇೀಕ್ಲು, ಏ. 8: ಐನ್‍ಮನೆಗಳು ಪ್ರತೀ ಕೊಡವ ಕುಟುಂಬದ ಹಿನ್ನೆಲೆ ಮತ್ತು ಚರಿತ್ರೆಯನ್ನು ಸಾರುವ ಪೂರ್ವಜರ ನೆಲೆಯಾಗಿದೆ. ಇದನ್ನು ಉಳಿಸಿ, ಬೆಳೆಸಿಕೊಳ್ಳುವದು ಆಯಾಯ ಕುಟುಂಬ ಸದಸ್ಯರ ಜವಾಬ್ದಾರಿಯಾಗಿದೆ ಎಂದು ಪೇರೂರು ಗ್ರಾಮದ ಮಚ್ಚೂರ ಕುಟುಂಬದ ಪಟ್ಟೇದಾರ ಸೋಮಯ್ಯ ಅಭಿಪ್ರಾಯಪಟ್ಟರು.
ಮಚ್ಚೂರ ಕುಟುಂಬಸ್ಥರಿಂದ ನಿರ್ಮಿಸಲಾದ ನೂತನ ಐನ್‍ಮನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಪೂರ್ವಜರು ಕಷ್ಟಪಟ್ಟು ನಿರ್ಮಿಸಿದ ಐನ್‍ಮನೆಗಳು ಕುಟುಂಬದ ದೇವಾಲಯವಿದ್ದಂತೆ. ಅದನ್ನು ಉಳಿಸುವ ಕೆಲಸವನ್ನು ಆಯಾ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಮಾಡಬೇಕು. ಅದರಿಂದ ಕೊಡವ ಕುಟುಂಬದ ಸಂಸ್ಕøತಿ, ಪದ್ಧತಿ - ಪರಂಪರೆ, ಆಚಾರ - ವಿಚಾರಗಳ ಬೆಳವಣಿಗೆಯೊಂದಿಗೆ ಆಯಾ ಕುಟುಂಬದ ಗುರು ಕಾರೋಣರ ಕೀರ್ತಿಯನ್ನು ಎಲ್ಲೆಡೆಗೆ ಪಸರಿಸಲು ಸಾಧ್ಯವಾಗಲಿದೆ ಎಂದರು.
ನಮ್ಮ ಕುಟುಂಬದಲ್ಲಿ 22 ಮನೆಗಳಿದ್ದು, ಒಟ್ಟು ನೂರು ಜನ ಮಾತ್ರ ಇದ್ದೇವೆ. ನಾವು ಪೇರೂರು ಇಗ್ಗುತ್ತಪ್ಪ ದೇವರ ದೇವತಕ್ಕ ಮತ್ತು ಮಚ್ಚೂರೋಡೆ ಮಂದ್‍ನ ತಕ್ಕರೂ ಆಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಕಳೆದ 17 ವರ್ಷಗಳ ಬಳಿಕ ನಮ್ಮ ನೂತನ ಐನ್‍ಮನೆಯ ಮೂಲಕ ಗುರು ಕಾರೋಣರಿಗೆ ಎಡೆ ಇಡುವ, ತವರು ಮನೆಯಿಂದ ಮದುವೆಯಾಗಿ ಹೋದ ಹಾಗೂ ಸಂಬಂಧಿಸಿದ ಬಂದು ಬಳಗವನ್ನು ಆಹ್ವಾನಿಸಿ ಐನ್‍ಮನೆ ಕಾರ್ಯಕ್ರಮಕ್ಕೆ ಮರು ಜೀವ ನೀಡಲಾಗಿದೆ ಎಂದರು. ಕಾರ್ಯಕ್ರಮಕ್ಕೆ ಆಗಮಿಸಿದ ನೆಂಟರಿಷ್ಟರು ಮತ್ತು ಬಂದು ಬಳಗದವರನ್ನು ಗಾಳಿಯಲ್ಲಿ ಗುಂಡು ಹಾರಿಸುವದರ ಮೂಲಕ ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳಕ್‍ನೊಂದಿಗೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕುಟುಂಬದ ಪ್ರಮುಖರಾದ ಮಚ್ಚೂರ ಈರಪ್ಪ, ಬಿದ್ದಯ್ಯ, ರವೀಂದ್ರ, ಮಂದಣ್ಣ, ತಮ್ಮಯ್ಯ, ಗಣಪತಿ, ಬೋಪಣ್ಣ, ರಮೇಶ್, ಸೋಮಯ್ಯ, ಪ್ರಕಾಶ್, ಬೋಪಣ್ಣ, ಅಯ್ಯಪ್ಪ ಮೊದಲಾದವರು ಇದ್ದರು.