ಗುಡ್ಡೆಹೊಸೂರು, ಏ. 8 ಇಲ್ಲಿನ ನರೇನ್ ಸುಬ್ಬಯ್ಯ ಕ್ರೀಡಾಂಗಣದಲ್ಲಿ 10 ದಿನಗಳಿಂದ ಜಿಲ್ಲಾ ಫುಟ್ಬಾಲ್ ಸಂಸ್ಥೆ ವತಿಯಿಂದ ನಡೆಯುತ್ತಿದ್ದ ಲೀಗ್ ಹಂತದ ಪಂದ್ಯಗಳು ಮುಗಿದು ಇಂದು ನಡೆದ ಅಂತಿಮ ಹಣಾಹಣಿ ಸುಂಟಿಕೊಪ್ಪ ತಂಡ ಮತ್ತು ಸಹರಾ ಒಂಟಿಯಂಗಡಿ ತಂಡಗಳ ನಡುವೆ ನಡೆಯಿತು. ಕೊನೆಯ ಕ್ಷಣದಲ್ಲಿ ಸಹರಾ ತಂಡ ಜಯಗಳಿಸಿ ಕೊಡಗು ಫುಟ್ಬಾಲ್ ಲೀಗ್ ಕಪ್ ಅನ್ನು ತನ್ನದಾಗಿಸಿಕೊಂಡಿತು.
ಸುಂಟಿಕೊಪ್ಪ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಸಹರಾ ತಂಡ ಸುಂಟಿಕೊಪ್ಪ ತಂಡ 2-1 ಗೋಲುಗಳಿಂದ ಸುಂಟಿಕೊಪ್ಪ ತಂಡವನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.ಸಭಾ ಕಾರ್ಯಕ್ರಮದಲ್ಲಿ ಕ್ರೀಡಾಂಗಣದ ಸ್ಥಾಪಕ ಅಧ್ಯಕ್ಷ ಐಚೆಟ್ಟಿರಾ ಸೋಮಯ್ಯ, ಐಚೆಟ್ಟಿರಾ ಪೋನ್ನಪ್ಪ ಸಂಸ್ಥೆಯ ಜಿಲ್ಲಾಧ್ಯಕ್ಷ ಮೋಹನ್ ಅಯ್ಯಣ್ಣ ಸದಸ್ಯ ವಿನೋದ್ ಶಿವಪ್ಪ ಇಂಡಿಯನ್ ಆಯಿಲ್ ಸಂಸ್ಥೆಯ
ಅಧಿಕಾರಿ ವೈಭವ್, ಡಾ. ಎಂ.ಸಿ. ಕಾರ್ಯಪ್ಪ ಐಚೆಟ್ಟಿರಾ ಕಾಮಿನಿ ಸೋಮಯ್ಯ, ಮುಂತಾದವರು ಹಾಜರಿದ್ದರು. ಮಧುರ ಪ್ರಾರ್ಥಿಸಿ, ನಾಗೇಶ್ ಈಶ್ವರ್ ಸ್ವಾಗತಿಸಿದರು.