ಮಡಿಕೇರಿ, ಏ. 8 :ಅಖಿಲ ಭಾರತೀಯ ಹಿಂದೂ ಮಹಾಸಭಾ ಜಿಲ್ಲೆಯ ಎರಡು ವಿಧಾನ ಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಮಡಿಕೆÉೀರಿ ಕ್ಷೇತ್ರದಲ್ಲಿ ರಾಜ್ಯ ಕಾರ್ಯದರ್ಶಿ ಮರಗೋಡು ಹೊಸ್ಕೇರಿಯ ಸಿ.ಜೆ.ಭಾರ್ಗವ ಸ್ಪರ್ಧಿಸಲಿದ್ದಾರೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಲೋಹಿತ್ ಸುವರ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನು ಒಂದು ವಾರದಲ್ಲಿ ಘೋಷಿಸುವದಾಗಿ ತಿಳಿಸಿದರು. ಹಿಂದು ಮಹಾಸಭಾ ಹಿಂದುತ್ವಕ್ಕಾಗಿ ರಾಜಕೀಯವನ್ನು ಮಾಡುತ್ತಿದ್ದು, ಈ ಬಾರಿಯ ಸ್ಪರ್ಧೆಯ ಮೂಲಕ ರಾಜಕೀಯ ಪಕ್ಷವಾಗಿ ಗುರುತಿಸಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು.
ನಮ್ಮದು ಸ್ಪರ್ಧೆಯಲ್ಲ ಬದಲಿಗೆ, ಭಾಗವಹಿಸುವಿಕೆ ಎಂದು ಸ್ಪಷ್ಟಪಡಿಸಿದ ಅವರು, ಹಿಂದೂ ಧರ್ಮ ಮತ್ತು ಸಂಸ್ಕøತಿಯ ರಕ್ಷಣೆ ನಮ್ಮ ಗುರಿ ಎಂದರು. ಬಿಜೆಪಿಯಿಂದ ಅಸಮಾಧಾನ ಗೊಂಡವರ ಮತಗಳು ಇತರ ಪಕ್ಷಗಳಿಗೆ ಹಂಚಿಹೋಗದೆ ಹಿಂದೂ ಮಹಾಸಭಾಕ್ಕೆ ಬರಬೇಕೆನ್ನುವದು ನಮ್ಮ ನಿರೀಕ್ಷೆಯಾಗಿದೆ. ಯುವ ಸಮೂಹದ ಬೆಂಬಲ ನಮ್ಮ ಪಕ್ಷಕ್ಕಿದೆ ಎಂದು ಲೋಹಿತ್ ಸುವರ್ಣ ವಿಶ್ವಾಸ ವ್ಯಕ್ತಪಡಿಸಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ಶ್ರೀನಿವಾಸ ರೈ ಮಾತನಾಡಿ, ಇತ್ತೀಚೆಗೆ ಹಿಂದೂ ಮಹಾಸಭಾದ ಹೆಸರಿನಲ್ಲಿ ಹರೀಶ್ ಜಿ.ಆಚಾರ್ಯ ಎಂಬವರು ಸುದ್ದಿಗೋಷ್ಠಿ ನಡೆಸಿದ್ದು, ಇವರ ವಿರುದ್ಧ ಚುನಾವಣಾಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡುವದಾಗಿ ತಿಳಿಸಿದರು. ಈ ಹಿಂದೆ ಹಿಂದೂ ಮಹಾಸಭಾದಲ್ಲಿ ಕಾರ್ಯನಿರ್ವ ಹಿಸುತ್ತಿದ್ದ ಹರೀಶ್ ಆಚಾರ್ಯ ಪ್ರಸ್ತುತ ಸದಸ್ಯತ್ವವನ್ನು ಕೂಡ ಹೊಂದಿಲ್ಲವೆಂದು ಸ್ಪಷ್ಡಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಅಭ್ಯರ್ಥಿ ಸಿ.ಜೆ. ಭಾರ್ಗವ ಹಾಗೂ ಶ್ರಮಿಕ್ ಸಭಾದ ಪ್ರಮುಖರಾದ ಉಮೇಶ್ ಈರಪ್ಪ ಉಪಸ್ಥಿತರಿದ್ದರು.