ಮಡಿಕೇರಿ, ಏ. 8: ಮೂರ್ನಾಡು ಸಮೀಪದ ಪಾಲೇಮಾಡುವಿನಲ್ಲಿ ನಿರ್ಮಾಣವಾಗುತ್ತಿರುವ ಕ್ರಿಕೆಟ್ ಸ್ಟೇಡಿಯಂ ಅನ್ನು ತಜ್ಞರು ಪರಿಶೀಲನೆ ನಡೆಸಿದರು.

ಕ್ರೀಡಾಂಗಣದ ಕಾಮಗಾರಿ ಭರದಿಂದ ಸಾಗಿದ್ದು, ಜಿಲ್ಲೆ ಸೇರಿದಂತೆ ರಾಜ್ಯದ ಕ್ರೀಡಾಪಟುಗಳಿಗೆ ಒಂದು ವರದಾನವಾಗಲಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಇಂದು ಕೆ.ಎಸ್.ಸಿ.ಎ. ಯೋಜನಾ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ ಸ್ವಾಮಿ, ಯೋಜನಾ ಅಭಿಯಂತರ ಶಾಂತಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ವಾಸ್ತುಶಿಲ್ಪಿ ಮುರಳಿ, ಗುತ್ತಿಗೆದಾರ ಹರಿಪ್ರಸಾದ್ ಅವರುಗಳು ಭೇಟಿ ನೀಡಿ ಪರಿಶೀಲಿಸಿದರು. ಕೆ.ಎಸ್.ಸಿ.ಎ. ಜಿಲ್ಲಾ ಸಂಯೋಜಕ ಪೃಥ್ವಿ ದೇವಯ್ಯ ಇದ್ದರು