ಕರಿಕೆ, ಏ. 8: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾಣಾಧಿಕಾರಿಗಳಾದ ಪಿ.ಐ. ಶ್ರೀವಿದ್ಯಾ ಅವರು ಇಂದು ಗಡಿಭಾಗದಲ್ಲಿ ಚುನಾವಣಾ ನಿಮಿತ್ತ ವಾಗಿ ಕಾರ್ಯ ನಿರ್ವಹಿಸುತ್ತಿರುವ ಚೆಕ್ ಪೋಸ್ಟ್‍ಗಳಿಗೆ ಭೇಟಿ ನೀಡಿ ಭದ್ರತೆ ಮತ್ತ ತಪಾಸಣೆಯನ್ನು ಪರಿಶೀಲನೆ ನಡೆಸಿದರು.

ಜಿಲ್ಲೆಯ ಎರಡು ಪ್ರಮುಖ ಗಡಿಭಾಗವಾದ ಕರಿಕೆ ಹಾಗೂ ಮಾಕುಟ್ಟ ತನಿಖಾ ಗೇಟ್‍ಗಳಿಗೆ ಭೇಟಿ ನೀಡಿ ಚುನಾವಣೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಭದ್ರತೆ ಹಾಗೂ ತಪಾಸಣೆ ಬಗ್ಗೆ ನಿಗಾವಹಿಸಿ ಸುಸೂತ್ರವಾಗಿ ಚುನಾವಣೆ ನಡೆಯುವ ಸಲುವಾಗಿ ಸೂಕ್ತ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ನಕ್ಸಲ್ ಪೀಡಿತ ಮತಗಟ್ಟೆ ಎಂದು ಗುರುತಿಸಿರುವ ಮುಂಡ್ರೋಟ್ ಮತಗಟ್ಟೆಗೆ ತೆರಳಿ ಭದ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು