ಗೋಣಿಕೊಪ್ಪಲು, ಏ. 8: ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಜೆ.ಎನ್. ಸುರೇಶ್ ಅವರು ಇಂದು ಮಧ್ಯಾಹ್ನ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪ್ರಮುಖರಾದ ಸಂಕೇತ್‍ಪೂವಯ್ಯ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಪೆÇನ್ನಂಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇಂದು ಮಧ್ಯಾಹ್ನ 2.30 ಗಂಟೆಗೆ ಅಧಿಕಾರಿ ಸುರೇಶ್ ದೂರು ಮೇರೆ ಪೆÇನ್ನಂಪೇಟೆ ಪೆÇಲೀಸ್ ಉಪನಿರೀಕ್ಷಕ ಮಹೇಶ್ ಅವರು ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅನ್ವಯ ಸೆ.63/2018 ಮತ್ತು 171ಇ ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಟ್ಟಗೇರಿಯ ಮಾಪಂಗಡ ಮುದ್ದಯ್ಯ ಎಂಬವರು ಹುಲಿ ಧಾಳಿಯಿಂದ ಹಸುವನ್ನು ಕಳೆದು ಕೊಂಡಿದ್ದು, ಸಂಕೇತ್‍ಪೂವಯ್ಯ ಅವರು ಆರ್ಥಿಕ ಪರಿಸ್ಥಿತಿ ನಷ್ಟ ಭರ್ತಿಗೆಂದು ರೂ.10 ಸಾವಿರ ನೆರವು ನೀಡಿದ ಕಾರಣಕ್ಕಾಗಿ ಪ್ರಕರಣ ದಾಖಲಾಗಿದೆ. - ಟಿ.ಎಲ್.ಎಸ್.