ಗೋಣಿಕೊಪ್ಪಲು, ಏ.8 : ಚುನಾವಣಾ ಮುಂಜಾಗ್ರತಾ ಕ್ರಮವಾಗಿ ಪೆÇನ್ನಂಪೇಟೆ ಠಾಣಾ ವ್ಯಾಪ್ತಿಯ 42 ಮಂದಿ ರೌಡಿ ಶೀಟರ್ಗಳ ಪೆರೇಡ್ ನಡೆಸಿ, ಮುನ್ನೆಚ್ಚರಿಕೆ ನೀಡಲಾಯಿತು.
ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷ ಹರಿಶ್ಚಂದ್ರ ಹಾಗೂ ಪೆÇನ್ನಂಪೇಟೆ ಪೆÇಲೀಸ್ ಉಪ ನಿರೀಕ್ಷಕ ಮಹೇಶ್ ಅವರು ಎಲ್ಲ ರೌಡಿ ಶೀಟರ್ಗಳಿಗೂ ಚುನಾವಣೆ ಸಂದರ್ಭ ಶಾಂತಿ ಭಂಗ ಮಾಡದಂತೆ, ಅಕ್ರಮ ಶಸ್ತ್ರಾಸ್ತ್ರ ಸಾಗಾಟ, ಹೊಡೆದಾಟ, ದೊಂಬಿ ಇತ್ಯಾದಿಗೆ ಕಾರಣವಾದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವದು ಎಂದು ಎಚ್ಚರಿಸಿದ್ದಾರೆ.