ಸುಂಟಿಕೊಪ್ಪ, ಏ. 8: ವ್ಯಕ್ತಿಯೊಬ್ಬರು ಹಂದಿ ಫಾರಂ ನಡೆಸುತ್ತಿದ್ದು, ಹಂದಿಯ ತ್ಯಾಜ್ಯ ವಸ್ತುಗಳನ್ನು ಹೊಳೆಗೆ ಹರಿಯಬಿಡುತ್ತಿದ್ದು ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಯಡವಾರೆ ಕಮ್ತಳಿ ಗ್ರಾಮಸ್ಥರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಐಗೂರು ಗ್ರಾಮ ಪಂಚಾಯಿತಿ ಯಡವಾರೆ ಕಮ್ತಳಿ ಗ್ರಾಮದಲ್ಲಿ ವ್ಯಕ್ತಿಯೋರ್ವ ಹಂದಿ ಸಾಕಾಣೆ ಉದ್ಯಮ ನಡೆಸುತ್ತಿದ್ದಾರೆ. ಈ ಹಂದಿಗಳಿಗೆ ಕುಶಾಲನಗರದ ಹೊಟೇಲ್‍ಗಳಿಂದ ತ್ಯಾಜ್ಯ ವಸ್ತುಗಳು ಕುರಿ, ಕೋಳಿಯ ಕರುಳು ಇತ್ಯಾದಿ ತಂದು ಹಾಕುತ್ತಿದ್ದಾರೆ. ಇದರಿಂದ ಪಕ್ಕದ ನಿವಾಸಿಗಳಿಗೆ ಜೀವನ ಸಾಗಿಸಲು ಸಾಧ್ಯವಾಗದ ಪರಿಸ್ಥಿತಿ ಬಂದಿದೆ. ಐಗೂರು ಗ್ರಾ.ಪಂ. ಅಧ್ಯಕ್ಷರು ಪಿಡಿಓ ಅವರುಗಳಿಗೆ ಅನೇಕ ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಜಿಲ್ಲಾ ಚುನಾವಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸ್ವಚ್ಛತೆಗೆ ವ್ಯತಿರಿಕ್ತವಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರುಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.