ಗೋಣಿಕೊಪ್ಪ ವರದಿ, ಏ. 8: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆ ಸಾಮಾಜಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಿವಮೊಗ್ಗ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಪಿ. ನಾರಾಯಣಸ್ವಾಮಿ ಹೇಳಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭ ‘ಕಾನನ ಕಲರವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಟಾಟಾ ಕಾಫಿ ಸೀನಿಯರ್ ಮ್ಯಾನೇಜರ್ ಎಂ.ಬಿ. ಗಣಪತಿ ಮಾತನಾಡಿ, ವಿದ್ಯಾರ್ಥಿಗಳು ಮೊದಲು ಗುರಿಯನ್ನು ಹೊಂದಿರಬೇಕು ನಂತರ ಅದನ್ನು ತಲಪುವ ಬಗ್ಗೆ ಚಿಂತಿಸಬೇಕು. ಆಗ ಮಾತ್ರ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭ ಕಾಲೇಜಿನ ವಾರ್ಷಿಕ ಸಂಚಿಕೆ ಕಾನನ ಕಲರವ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಕ್ರೀಡೆ ಮತ್ತು ಸಾಂಸ್ಕøತಿಕ ವಿಭಾಗಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಸುಮಾರು 50 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅರಣ್ಯ ಮಹಾವಿದ್ಯಾಲಯದ ಜಡೇಗೌಡ ವಾರ್ಷಿಕ ವರದಿ ಮಂಡಿಸಿದರು.
ಅರಣ್ಯ ಅಲುಮಿನಿ ಅಸೋಸಿಯೇಶನ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಅತ್ಯುತ್ತಮ ಕ್ರೀಡಾ ಪ್ರಶಸ್ತಿಯನ್ನು ಹಸ್ತ ಶೆಟ್ಟಿ, ಶಾಂತಕುಮಾರಿ ಮೆಮೋರಿಯಲ್ ಅವಾರ್ಡ್ನ್ನು ಕನ್ನಡ ಕುಸುಮ, ಮುಕ್ಕಾಟೀರ ಕೌಶಲ್ಯ ಅವರ ಜ್ಞಾಪಕಾರ್ಥವಾಗಿ ಪ್ರಶಂಸನೀಯ ವಿದ್ಯಾರ್ಥಿ ಪ್ರಶಸ್ತಿಯನ್ನು ಚಂದನ್ ಶೆಟ್ಟಿ, ಗಣರಾಜ್ಯೋತ್ಸವದ ಪೆರೆಡ್ನಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿದ ಕಾದೇಶ್ ರಾಮಪ್ಪ ಕೋತ್, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಅವಿನಾಷ್ ಕುಮಾರ್, ಚೆಪ್ಪುಡಿರ ಗಣಪತಿ ಅವರ ಜ್ಞಾಪಕಾರ್ಥವಾಗಿ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಕನ್ನಡ ಕುಸುಮ, ಕೃಷಿ ವಿಜ್ಞಾನಗಳ ಫೋರಂ ಆಫ್ ಕೊಡಗು ಹೆಸರಿನಲ್ಲಿ ಹಾಗೂ ಎನ್.ಎಂ. ಪೂಣಚ್ಚ ಜ್ಞಾಪಕಾರ್ಥವಾಗಿ ಚಿನ್ನದ ಪದಕವನ್ನು ಬಿಎಸ್ಸಿ ಪದವಿಯಲ್ಲಿ ಹೆಚ್ಚು ಅಂಕ ಪಡೆದ ಭವಿಕ ಕೆ. ಕಡೂರ್ ಮತ್ತು ನವ್ಯಶ್ರೀ ಪ್ರಶಸ್ತಿಯನ್ನು ಪಡೆದುಕೊಂಡರು. ಭವಿನ್ ಕುಮಾರ್ ಸ್ವಾಗತಿಸಿದರು, ಹಸ್ತ ಶೆಟ್ಟಿ ನಿರೂಪಿಸಿದರು, ರಾಜೇಶ್ವರಿ ವಂದಿಸಿದರು.