ಗೋಣಿಕೊಪ್ಪ ವರದಿ, ಏ. 8: ಕ್ರೋಢನಾಡ್ ಕೊಡವ ಮಕ್ಕ ಹಾಗೂ ಹಾಕಿಕೂರ್ಗ್ ವತಿಯಿಂದ ಆಯೋಜಿಸಿದ್ದ ಚೊಚ್ಚಲ ಹಾಕಿ ಟೂರ್ನಿಯಲ್ಲಿ ವೀರಾಜಪೇಟೆ ಸೆಂಟ್ ಆನ್ಸ್ ತಂಡ ಗೆದ್ದುಕೊಂಡಿದೆ. ಫೈನಲ್‍ನಲ್ಲಿ ಸೋಲನುಭವಿಸಿದ ಮೂರ್ನಾಡು ಫಸ್ಟ್ ಗ್ರೇಡ್ ಕಾಲೇಜು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ ಅಂತರ್ ಪದವಿ ಕಾಲೇಜು ಮಟ್ಟದ ಟೂರ್ನಿಯಲ್ಲಿ ಸೆಂಟ್ ಆನ್ಸ್ ತಂಡವು ಟೈಬ್ರೇಕರ್‍ನಲ್ಲಿ ಶೂಟೌಟ್ ಮೂಲಕ 2-1 ಗೋಲುಗಳ ಮೂಲಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಉಭಯ ತಂಡಗಳು ಪಂದ್ಯದ ನಿಗಧಿತ ಅವಧಿಯಲ್ಲಿ ಗೋಲು ದಾಖಲಿಸದೆ ನಿರಾಸೆ ಮೂಡಿಸಿದವು. ನಂತರ ನಡೆದ ಗೋಣಿಕೊಪ್ಪ ವರದಿ, ಏ. 8: ಕ್ರೋಢನಾಡ್ ಕೊಡವ ಮಕ್ಕ ಹಾಗೂ ಹಾಕಿಕೂರ್ಗ್ ವತಿಯಿಂದ ಆಯೋಜಿಸಿದ್ದ ಚೊಚ್ಚಲ ಹಾಕಿ ಟೂರ್ನಿಯಲ್ಲಿ ವೀರಾಜಪೇಟೆ ಸೆಂಟ್ ಆನ್ಸ್ ತಂಡ ಗೆದ್ದುಕೊಂಡಿದೆ. ಫೈನಲ್‍ನಲ್ಲಿ ಸೋಲನುಭವಿಸಿದ ಮೂರ್ನಾಡು ಫಸ್ಟ್ ಗ್ರೇಡ್ ಕಾಲೇಜು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ ಅಂತರ್ ಪದವಿ ಕಾಲೇಜು ಮಟ್ಟದ ಟೂರ್ನಿಯಲ್ಲಿ ಸೆಂಟ್ ಆನ್ಸ್ ತಂಡವು ಟೈಬ್ರೇಕರ್‍ನಲ್ಲಿ ಶೂಟೌಟ್ ಮೂಲಕ 2-1 ಗೋಲುಗಳ ಮೂಲಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಉಭಯ ತಂಡಗಳು ಪಂದ್ಯದ ನಿಗಧಿತ ಅವಧಿಯಲ್ಲಿ ಗೋಲು ದಾಖಲಿಸದೆ ನಿರಾಸೆ ಮೂಡಿಸಿದವು. ನಂತರ ನಡೆದ ತಂಡದ ಸಜಿತ್, ಬೆಸ್ಟ್ ಬ್ಯಾಕ್ ಪ್ರಶÀಸ್ತಿಯನ್ನು ವೀರಾಜಪೇಟೆ ಕಾವೇರಿ ಕಾಲೇಜು ತಂಡದ ಪೊನ್ನಣ್ಣ, ಬೆಸ್ಟ್ ಫಾರ್ವರ್ಡ್ ಪ್ರಶಸ್ತಿಯನ್ನು ಕೂರ್ಗ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡದ ಅಪ್ಪಚ್ಚು, ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಮೂರ್ನಾಡು ತಂಡದ ದಿಲನ್ ಪಡೆದುಕೊಂಡರು.

ಕ್ರೀಡಾಪಟು ಕಂಬೀರಂಡ ಬೋಪಣ್ಣ ಉದ್ಘಾಟಿಸಿದರು. ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ, ಚಾರ್ಮರ್ಸ್ ಸ್ಪೋಟ್ರ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಕಲ್ಲುಮಾಡಂಡ ನವೀನ್, ಗೋಣಿಕೊಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಹಿರಿಯ ಕಾಫಿ ಬೆಳೆಗಾರ ಅಜ್ಜಿಕುಟ್ಟೀರ ಭೀಮಯ್ಯ, ಕ್ರೋಢನಾಡ್ ಕೊಡವ ಮಕ್ಕ ಸಂಘಟನೆ ಅಧ್ಯಕ್ಷ ಕೇಚಂಡ ರಂಜನ್ ಮಂದಣ್ಣ ಪಾಲ್ಗೊಂಡು ಬಹುಮಾನ ವಿತರಿಸಿದರು.