ಮಡಿಕೇರಿ: 2018ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ 530 ಮತಗಟ್ಟೆಗಳ ಉಸ್ತುವಾರಿಯಾಗಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಅರೆಭಾಷೆ ಅಕಾಡಮಿಯ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್ ಅವರನ್ನು ನೇಮಕ ಮಾಡಲಾಗಿದೆ.

ಕೆ.ಪಿ.ಸಿ.ಸಿ. ಸೂಚನೆ ಮೇರೆಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಹಾಗೂ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ನೇಮಕಾತಿ ಆದೇಶವನ್ನು ಇಂದು ನೀಡಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನೀರ ಮೈನಾ, ತಾ.ಪಂ. ಸದಸ್ಯರಾದ ಪಲ್ವಿನ್ ಪೂಣಚ್ಚ, ನಂದಿನೆರವಂಡ ಮಧು, ಎಪಿಎಂಸಿ ಸದಸ್ಯರಾದ ವಿ.ಎಲ್. ಸುರೇಶ್, ಚಟ್ಟಂಗಡ ಅಭಿನ್, ಎಂ.ಎಂ. ಹನೀಫ್ ಸೇರಿದಂತೆ ಪ್ರಮುಖರು ಈ ಸಂದರ್ಭ ಹಾಜರಿದ್ದರು.

ಮಣಿ ಉತ್ತಪ್ಪ ವಿರುದ್ಧ ಅಸಮಾಧಾನ

ಸುಂಟಿಕೊಪ್ಪ: ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ ಅವರ ವಿರುದ್ಧ ಹಾಗೂ ಸಂಘ ಪರಿವಾರದ ವಿರುದ್ಧ ಹೇಳಿಕೆ ನೀಡಿರುವ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಪಕ್ಷ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಕಂಬಿಬಾಣೆಯ ಬಿಜೆಪಿ ಸ್ಥಾನೀಯ ಸಮಿತಿಯವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಪಕ್ಷ ಹಾಗೂ ಸಂಘ ಪರಿವಾರದ ಬಗ್ಗೆ ಲಘುವಾಗಿ ಮಾತನಾಡಿದ್ದು ಜನಪ್ರತಿನಿಧಿಯಾದ ಅವರ ಘನತೆಗೆ ತಕ್ಕುದಲ್ಲ, ಬಿಜೆಪಿ ಜಿಲ್ಲಾಧ್ಯಕ್ಷರು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿದ ಪರಿಣಾಮ ಹೈಕಮಾಂಡ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದೆ. ಮಣಿ ಅವರನ್ನು ಪಕ್ಷದಿಂದ 2 ಬಾರಿ ಉಚ್ಚಾಟಿಸಲಾಗಿದೆ ಎಂದಿರುವ ಪದಾಧಿಕಾರಿಗಳು ಭಾರತೀಶರು ಅಧ್ಯಕ್ಷರನ್ನಾಗಿದ್ದು, ತಾನು ಒಪ್ಪುವದಿಲ್ಲ ಎಂದರು. ಹೇಳಿರುವದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ಪಕ್ಷದಿಂದ ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಎಲ್ಲಾ ಹುದ್ದೆಯನ್ನು ಅನುಭವಿಸಿ ಪಕ್ಷದ ಜಿಲ್ಲಾಧ್ಯಕ್ಷರನ್ನು ಟೀಕಿಸಿದ್ದು ಖಂಡನೀಯ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕಂಬಿಬಾಣೆಯ ಸ್ಥಾನೀಯ ಸಮಿತಿ ಅಧ್ಯಕ್ಷ ಜಯಂತ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಆನಂದ, ಮನು,ಮಾಜಿ ಅಧ್ಯಕ್ಷ ಡಾ. ಶಶಿಕಾಂತರೈ, ಬಿ.ಜಿ. ಜವಾಹರ್, ದಿನೇಶ್, ಸಿದ್ದತ ಹಾಗೂ ರವಿ ಒತ್ತಾಯಿಸಿದ್ದಾರೆ

ಮಣಿಗೆ ಪ್ರಶ್ನೆ

ಸುಂಟಿಕೊಪ್ಪ: ಗುಡ್ಡೆಹೊಸೂರು ಜಿ.ಪಂ. ಕ್ಷೇತ್ರದಲ್ಲಿ ಬಿ.ಬಿ. ಭಾರತೀಶ್ ಸ್ಪರ್ಧಿಸಿ ಸೋತಿರುವದು ಬಲ್ಲಾರಂಡ ಮಣಿ ಉತ್ತಪ್ಪ ಮರೆತಿದ್ದಾರೆಯೆ ಎಂದು ಕಾಂಗ್ರೆಸ್ ಪಕ್ಷದ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಆರ್.ಕೆ. ಚಂದ್ರು ಪ್ರಶ್ನಿಸಿದ್ದಾರೆ.

ಗುಡ್ಡೆಹೊಸೂರು ಜಿ.ಪಂ. ಕ್ಷೇತ್ರಕ್ಕೆ ಒಳಗೊಂಡಂತೆ 4 ಗ್ರಾಮ ಪಂಚಾಯಿತಿಗಳು ಒಳಗೊಂಡಿದ್ದು, 3 ಮೂರು ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಆಡಳಿತ ನಡೆಸುತ್ತಿದ್ದಾರೆ. ಎಂಬದನ್ನು ಅವರು ಮೊದಲಿಗೆ ಆರಿತುಕೊಳ್ಳಲಿ, ಗುಡ್ಡೆಹೊಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಲತೀಫ್ ಇತರ ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಗಿಂತಲೂ ಮುಂಚೂಣಿಯಲ್ಲಿದ್ದು ಗೆಲುವಿಗೆ ಸಹಕಾರಿಯಾಗಿದೆ ಎಂದಿದ್ದಾರೆ.

ಈ ಪತ್ರಿಕಾ ಹೇಳಿಕೆಯ ಸಂದರ್ಭ ಮಾದಪಟ್ಟಣ ದಾಮೋದರ, ಶಶಿ ಭೀಮಯ್ಯ, ಕಾಂಗ್ರೆಸ್ ವಲಯಾಧ್ಯಕ್ಷ ಗುಡ್ಡೆಹೊಸೂರು ಹಾಗೂ ಗ್ರಾ.ಪಂ. ಸದಸ್ಯ ಪ್ರಸನ್ನ ಕುಮಾರ್, ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಭಾರತಿ, 7ನೇ ಹೊಸಕೋಟೆ ವಲಯಾಧ್ಯಕ್ಷ ಹಾಗೂ ಗ್ರಾ.ಪಂ. ರಮೇಶ್, ಗ್ರಾ.ಪಂ. ಉಪಾಧ್ಯಕ್ಷ ಮುಸ್ತಾಫ ಮತ್ತಿತರರು ಇದ್ದರು.

ಜೆಡಿಎಸ್‍ಗೆ ಸೇರ್ಪಡೆ

ಕೂಡಿಗೆ: ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹಾಗೂ ಗುತ್ತಿಗೆದಾರ ಕೆ.ಎಸ್. ಕೃಷ್ಣೇಗೌಡ ಅವರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.

ಅವರು ಮೈಸೂರಿನಲ್ಲಿ ಜೆಡಿಎಸ್ ಮುಖಂಡ ಜಿ.ಟಿ. ದೇವಗೌಡ ಅವರ ಸಮ್ಮುಖದಲ್ಲಿ ಅವರ ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷಕ್ಕೆ sಸೇರಿದರು.

ಸೋಮವಾರಪೇಟೆ: ಜೆಡಿಎಸ್ ಮಡಿಕೇರಿ ಕ್ಷೇತ್ರ ಸಮಿತಿಯ ಮಹಿಳಾ ಘಟಕದ ಉಪಾಧ್ಯಕ್ಷರುಗಳಾಗಿ ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್, ಸದಸ್ಯೆ ಕುಸುಮ ಅಶ್ವಥ್, ಪವಿತ್ರ ದೇವೇಂದ್ರ, ಹೆಚ್.ಈ. ಸುನಂದ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕ್ಷೇತ್ರ ಸಮಿತಿ ಅಧ್ಯಕ್ಷೆ ಜಾನಕಿ ವೆಂಕಟೇಶ್ ತಿಳಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಸಂದ್ಯಾ ಹರೀಶ್, ಸಹ ಕಾರ್ಯದರ್ಶಿಗಳಾಗಿ ಝಾನ್ಸಿ ಗಿರೀಶ್, ಶೋಭ ಹೊನ್ನಪ್ಪ, ಸದಸ್ಯರುಗಳಾಗಿ ಪದ್ಮ ಕೃಷ್ಣಪ್ಪ, ಅನಿತಾ ರಮಾನಂದ, ವೀಣಾ ಉಲ್ಲಾಸ್, ಯಶೋಧ ಉಕ್ರಪ್ಪ, ಭಾನು ಮಾಚಯ್ಯ, ಜೈನಾಭಿ ಅವರುಗಳು ಆಯ್ಕೆಯಾಗಿದ್ದಾರೆ. ಪಕ್ಷದ ನಗರ ಎಸ್.ಸಿ. ಘಟಕದ ಅಧ್ಯಕ್ಷರಾಗಿ ಹೆಚ್.ಎಸ್. ಉಮೇಶ್ ಆಯ್ಕೆಯಾಗಿದ್ದಾರೆ.

ಜೆಡಿಎಸ್‍ಗೆ ನೇಮಕ

ವೀರಾಜಪೇಟೆ: ಜಾತ್ಯತೀತ ಜನತಾದಳ ವೀರಾಜಪೆಟೆ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣ ವಿಭಾಗಕ್ಕೆ ನೇಮಕ ಮಾಡಲಾಗಿದೆ.

ಗ್ಲಾಡ್‍ಸನ್, ವಿನು, ಶಿಹಾಬ್, ರಝಾಕ್, ಗಿರೀಶ್, ಅಬೂಬಕರ್, ಪಟ್ಟು, ನಂದ, ರಾಮು, ಸೈಫುಲ್ಲಾ, ಶಂಕರ್, ಶಿವು, ಸಿರಾಜ್, ಝುಬೇದ, ಅಶ್ರಫ್, ರಾಯ್, ಕುಂಞÂ ಅಹಮದ್ ಹಾಗೂ ಹೆ.ಎ. ಗೋಪಾಲ ಅವರುಗಳನ್ನು ಪಕ್ಷದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರ ನಿರ್ದೇಶನದ ಮೇರೆಗೆ ಸಾಮಾಜಿಕ ಜಾಲತಾಣ ವಿಭಾಗದ ಕ್ಷೇತ್ರ ಪ್ರಧಾನ ಸಂಚಾಲಕ ಸಿ.ಎ. ನಾಸಿರ್ ಈ ನೇಮಕಾತಿ ಮಾಡಿದ್ದಾರೆ.